Who would be CM? ಮನಸಲ್ಲಿ ದುಗುಡವಿದ್ದರೂ ದೆಹಲಿಯಲ್ಲಿ ಅಪ್ತರೊಂದಿಗೆ ಮಾಂಸದೂಟ ಸವಿದ ಸಿದ್ದರಾಮಯ್ಯ

|

Updated on: May 16, 2023 | 4:02 PM

135 ಸ್ಥಾನಗಳನ್ನು ಗೆಲ್ಲುವುದಕ್ಕಿಂತ ಮುಖ್ಯಮಂತ್ರಿಯನ್ನು ಅರಿಸುವುದು ಕಷ್ಟವಾಗುತ್ತಿದೆಯಲ್ಲ ಅಂತ ಕೇಳಿದ್ದಕ್ಕೆ ನಾನು ಹೈಕಮಾಂಡ್ ಗೆ ಭೇಟಿ ಮಾಡುವವರೆಗೆ ಅಂಥ ಪ್ರಶ್ನೆಗಳನ್ಮು ಕೇಳಬೇಡಿ, ಎನ್ನುತ್ತಾರೆ.

ದೆಹಲಿ: ಮುಖ್ಯಮಂತ್ರಿಯಾಗುತ್ತೇನೋ ಇಲ್ಲವೋ ಎಂಬ ದುಗುಡ ಮತ್ತು ಆತಂಕ ತಲೆಯಲ್ಲಿ ಮನೆ ಮಾಡಿದ್ದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಮ್ಮ ಬೆಂಬಲಿಗ ಶಾಸಕರೊಂದಿಗೆ ಮಾಂಸಾಹಾರ ಸೇವಿಸಿದರು. ಊಟಕ್ಕೆ ಹೋಗುವಾಗ ಕೆಲ ಇಂಗ್ಲಿಷ್ ಪತ್ರಕರ್ತರು (English journalists) ಕೇಳಿದ ಪ್ರಶ್ನೆಗಳಿಗೆ ಒಲ್ಲದ ಮನಸ್ಸ್ಸು ಮತ್ತು ಸಿಡುಕುತನದಿಂದ ಉತ್ತರಿಸಿದ ಸಿದ್ದರಾಮಯ್ಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (assembly polls) ಏನು ನಡೆಯಿತು ಅಂತ ಪ್ರತಿಯೊಬ್ಬರಿಗೆ ಗೊತ್ತಿದೆ ಅಂತ ಹೇಳಿದರು. ಪತ್ರಕರ್ತರೊಬ್ಬರು, ಕರ್ನಾಟಕದಲ್ಲಿ 135 ಸ್ಥಾನಗಳನ್ನು ಗೆಲ್ಲುವುದಕ್ಕಿಂತ ಮುಖ್ಯಮಂತ್ರಿಯನ್ನು ಅರಿಸುವುದು ಕಷ್ಟವಾಗುತ್ತಿದೆಯಲ್ಲ ಅಂತ ಕೇಳಿದ್ದಕ್ಕೆ ನಾನು ಹೈಕಮಾಂಡ್ ಗೆ ಭೇಟಿ ಮಾಡುವವರೆಗೆ ಅಂಥ ಪ್ರಶ್ನೆಗಳನ್ಮು ಕೇಳಬೇಡಿ, ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ