Slain and accused kin?  ಹೊಸಕೋಟೆಯಲ್ಲಿ ಕೊಲೆಯಾದ ಕೃಷ್ಣಪ್ಪ ಮತ್ತು ಆರೋಪಿ ದಾಯಾದಿಗಳು ಹಾಗೂ ಇಬ್ಬರೂ ಬಿಜೆಪಿ ಕಾರ್ಯಕರ್ತರು: ಶರತ್ ಬಚ್ಚೇಗೌಡ, ಶಾಸಕ

Slain and accused kin?  ಹೊಸಕೋಟೆಯಲ್ಲಿ ಕೊಲೆಯಾದ ಕೃಷ್ಣಪ್ಪ ಮತ್ತು ಆರೋಪಿ ದಾಯಾದಿಗಳು ಹಾಗೂ ಇಬ್ಬರೂ ಬಿಜೆಪಿ ಕಾರ್ಯಕರ್ತರು: ಶರತ್ ಬಚ್ಚೇಗೌಡ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: May 16, 2023 | 5:24 PM

ಕೃಷ್ಣಪ್ಪ ಮತ್ತು ಆರೋಪಿ ಇಬ್ಬರು ಬಿಜೆಪಿ ಪಕ್ಷದವರು ಅಂತ ತನಿಖೆ ನಡೆಸುತ್ತಿರುವ ಸರ್ಕಲ್ ಇನ್ಸ್ ಪೆಕ್ಟರ್ ತನಗೆ ಕಳಿಸಿರುವ ವಾಟ್ಸ್ಯಾಪ್ ಸಂದೇಶವನ್ನು ಶರತ್ ಓದಿ ಹೇಳಿದರು.

ಹೊಸಕೋಟೆ: ಕ್ಷೇತ್ರದ ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ (Krishnappa) ಹತ್ಯೆಗೆ ರಾಜಕೀಯ ಬಣ್ಣ ಕಟ್ಟಿ ಬಿಜೆಪಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ (Sharath Bachegowda) ಹೇಳಿದರು. ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಬಿಜೆಪಿ ನಾಯಕರೊಬ್ಬರು (BJP leader) ಸುಖಾಸುಮ್ಮನೆ, ಆಧಾರರಹಿತವಾಗಿ ಕಾಂಗ್ರೆಸ್ ಪಕ್ಷವನ್ನು ಪ್ರಕರಣದಲ್ಲಿ ಎಳೆದು ತರುತ್ತಿದ್ದಾರೆ ಎಂದು ಶರತ್ ಹೇಳಿದರು. ಅಸಲಿಗೆ ಕೊಲೆಯಾಗಿರುವ ಕೃಷ್ಣಪ್ಪ ಮತ್ತು ಹಲ್ಲೆ ಮಾಡಿದ ವ್ಯಕ್ತಿ ದಾಯಾದಿಗಳು ಮತ್ತು ಇಬ್ಬರೂ ಬಿಜೆಪಿ ಕಾರ್ಯಕರ್ತರು. ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಕಲಹವಿತ್ತು ಎಂದು ಮೃತ ಕೃಷ್ಣಪ್ಪನ ಸಹೋದರನೇ ಹೇಳಿರುವನೆಂದು ಶರತ್ ಬಚ್ಚೇಗೌಡ ಹೇಳಿದರು. ಅದಲ್ಲದೆ, ಎಫ್ ಐ ಆರ್ ನಲ್ಲಿ ಹಲ್ಲೆ ಮಾಡಿದವನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಅಂತ ಉಲ್ಲೇಖಿಸಿಲ್ಲ ಅಂತ ಅದರ ಪ್ರತಿ ಮಾಧ್ಯಮದವರಿಗೆ ತೋರಿಸಿದ ಶರತ್, ಕೃಷ್ಣಪ್ಪ ಮತ್ತು ಆರೋಪಿ ಇಬ್ಬರು ಬಿಜೆಪಿ ಪಕ್ಷದವರು ಅಂತ ತನಿಖೆ ನಡೆಸುತ್ತಿರುವ ಸರ್ಕಲ್ ಇನ್ಸ್ ಪೆಕ್ಟರ್ ತನಗೆ ಕಳಿಸಿರುವ ವಾಟ್ಸ್ಯಾಪ್ ಸಂದೇಶವನ್ನು ಓದಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ