ಸಿದ್ದರಾಮಯ್ಯ ಗೂಂಡಾ ವರ್ತನೆಗೆ ನಾವು ಹೆದರಲ್ಲ, ತಕ್ಕ ಉತ್ತರ ನೀಡುತ್ತೇವೆ: ಛಲವಾದಿ ನಾರಾಯಣಸ್ವಾಮಿ, ಎಮ್ಮೆಲ್ಸಿ

Updated on: Feb 15, 2024 | 4:35 PM

ಸಿದ್ದರಾಮಯ್ಯ ಇದಕ್ಕೆ ಮೊದಲು ಸಹ ಸದನದಲ್ಲಿ ಗೂಂಡಾಗಿರಿ ಪ್ರದರ್ಶಿಸಿ ತೋಳು ತಟ್ಟಿದ್ದನ್ನು ನಾವು ನೋಡಿದ್ದೇವೆ, ಇಂಥ ವರ್ತನೆ ಅವರಿಗೆ ಹೊಸದಲ್ಲ, ಅಹಂಕಾರದ ಮೂಟೆಯಾಗಿರುವ ಅವರು ತಮ್ಮ ವರ್ತನೆಗೆ ಕ್ಷಮೆ ಕೇಳಲ್ಲ, ಆದರೆ ಅವರ ಗೂಂಡಾಗಿರಿಗೆ ನಾವು ಹೆದರಲ್ಲ, ಇವತ್ತು ಸದನದಲ್ಲಿ ಅವರು ತೋರಿದ ದುರ್ವರ್ತನೆಯನ್ನು ಖಂಡಿಸಿ ಸಭಾತ್ಯಾಗ ಮಾಡಿದ್ದೇವೆ ಎಂದು ನಾರಾಯಣಸ್ವಾಮಿ ಹೇಳಿದರು.

ಬೆಂಗಳೂರು: ನಾಡಿನ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು (Siddaramaiah) ವಿಧಾನ ಪರಿಷತ್ ನಲ್ಲಿ ಗೂಂಡಾನಂತೆ ವರ್ತಿಸಿದ್ದಾರೆ ಎಂದು ಬಿಜೆಪಿಯ ಎಮ್ ಎಲ್ ಸಿ ಛಲವಾದಿ ನಾರಾಯಣಸ್ವಾಮಿ (BJP MLC Narayana Swamy) ಕಿಡಿಕಾರಿದರು. ವಿಧಾನ ಪರಿಷತ್ ನಲ್ಲಿ ಇಂದು ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರನ್ನು ಗೂಂಡಾಗಳೆಂದು ಹೇಳಿದರು. ನೀವು ಗೂಂಡಾಗಿರಿ ಮಾಡಿದ್ರೆ ನಾನು ಹೆದರುವವನಲ್ಲ, ನಿಮ್ಮ ವರ್ತನೆಯನ್ನು 7 ಕೋಟಿ ಕನ್ನಡಿಗರು (7 crore Kannadigas) ನೋಡಿ ಛೀ ಥೂ ಅನ್ನುತ್ತಿದ್ದಾರೆ ಅಂತ ಸಿದ್ದರಾಮಯ್ಯ ಕೋಪದಿಂದ ವಿರೋಧ ಪಕ್ಷದ ನಾಯಕರ ಮೇಲೆ ಮುಗಿಬಿದ್ದಾಗ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಸಿದ್ದರಾಮಯ್ಯ ಇದಕ್ಕೆ ಮೊದಲು ಸಹ ಸದನದಲ್ಲಿ ಗೂಂಡಾಗಿರಿ ಪ್ರದರ್ಶಿಸಿ ತೋಳು ತಟ್ಟಿದ್ದನ್ನು ನಾವು ನೋಡಿದ್ದೇವೆ, ಇಂಥ ವರ್ತನೆ ಅವರಿಗೆ ಹೊಸದಲ್ಲ, ಅಹಂಕಾರದ ಮೂಟೆಯಾಗಿರುವ ಅವರು ತಮ್ಮ ವರ್ತನೆಗೆ ಕ್ಷಮೆ ಕೇಳಲ್ಲ, ಆದರೆ ಅವರ ಗೂಂಡಾಗಿರಿಗೆ ನಾವು ಹೆದರಲ್ಲ, ಇವತ್ತು ಸದನದಲ್ಲಿ ಅವರು ತೋರಿದ ದುರ್ವರ್ತನೆಯನ್ನು ಖಂಡಿಸಿ ಸಭಾತ್ಯಾಗ ಮಾಡಿದ್ದೇವೆ, ಇಂಥ ವರ್ತನೆ ಮುಂದುವರಿದಿದ್ದೇಯಾದರೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಅವರಿಗೆ ನೀಡುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More