ಸಿದ್ದರಾಮಯ್ಯ ಸೋಲುವಂತಾಗಲು ಅವರ ಪಕ್ಷದವರೇ ಒಂದು ಷಡ್ಯಂತ್ರ ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ
ಸಿದ್ದರಾಮಯ್ಯನವರನ್ನು ಸೋಲಿಸಲು ಅವರ ಪಕ್ಷದ ಕೆಲ ನಾಯಕರೇ ಒಂದು ಷಡ್ಯಂತ್ರ ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನದಲ್ಲಿದ್ದಾರೆ, ಆ ಪಕ್ಷವನ್ನು ಸೋಲಿಸಲು ಎದುರಾಳಿಗಳೇ ಬೇಡ, ಅವರ ಆಂತರಿಕ ಜಗಳಗಳಿಂದ ತಾವು ತೋಡಿಕೊಂಡ ಖೆಡ್ಡಾಗೆ ಬೀಳುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ರಾಜ್ಯದ ಒಬ್ಬ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ರಾಷ್ಟ್ರೀಯ ಪಕ್ಷವೊಂದರ ನಾಯಕನಾಗಿರುವ ಸಿದ್ದರಾಮಯ್ಯರಂಥವರಿಗೆ (Siddaramaiah) ಕ್ಷೇತ್ರ ಹುಡುಕುವಂಥ ಪರಿಸ್ಥಿತಿ ಉಂಟಾಗಿರುವುದು ಶೋಚನೀಯ ಎಂದು ಹೆಚ್ ಡಿ ಕುಮಾರಸ್ವಾಮಿ (HD Kumaraswamy)ಹೇಳಿದರು. ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕುಮಾರಸ್ವಾಮಿ, ಇನ್ನು ಜೆಡಿಎಸ್ ಪಕ್ಷದ (JDS party) ನಾಯಕರ್ಯಾರೂ ಕಾಂಗ್ರೆಸ್ ಸೇರುವುದಿಲ್ಲ ಅಂತ ಹೇಳಿದರು. ಸಿದ್ದರಾಮಯ್ಯನವರನ್ನು ಸೋಲಿಸಲು ಅವರ ಪಕ್ಷದ ಕೆಲ ನಾಯಕರೇ ಒಂದು ಷಡ್ಯಂತ್ರ ರೂಪಿಸಿ ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನದಲ್ಲಿದ್ದಾರೆ, ಆ ಪಕ್ಷವನ್ನು ಸೋಲಿಸಲು ಎದುರಾಳಿಗಳೇ ಬೇಡ, ಅವರ ಆಂತರಿಕ ಜಗಳಗಳಿಂದ ತಾವು ತೋಡಿಕೊಂಡ ಖೆಡ್ಡಾಗೆ ಬೀಳುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ