Hassan: ಆಗಾಗ ಉತ್ತರ ಭಾರತದ ಕಡೆ ಹೋಗುವ ಸಿಟಿ ರವಿ ಮೇಲೆ ಅಲ್ಲಿನ ಖೀಮಾ ಜಾಸ್ತಿ ಪ್ರಭಾವ ಬೀರಿದಂತಿದೆ: ಹೆಚ್ ಡಿ ಕುಮಾರಸ್ವಾಮಿ
ರವಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿರುವುದರಿಂದ ಉತ್ತರ ಭಾರತದ ಕಡೆ ಹೋಗುತ್ತಿರುತ್ತಾರೆ. ಆ ಭಾಗದ ಪ್ರಮುಖ ಆಹಾರ ಪದಾರ್ಥಗಳಲ್ಲೊಂದಾಗಿರುವ ಖೀಮಾ ಅವರ ಮೇಲೆ ತುಂಬಾನೇ ಪ್ರಭಾವ ಬೀರಿದಂತಿದೆ ಅಂತ ಹೆಚ್ಡಿಕೆ ಹೇಳಿದರು.
ಹಾಸನ: ಪಂಚರತ್ನ ಯಾತ್ರೆಯ ಭಾಗವಾಗಿ ಹಾಸನ ಜಿಲ್ಲೆಯ ಪ್ರವಾಸ ಮಾಡುತ್ತಿರುವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಉರಿಗೌಡ, ನಂಜೇಗೌಡ ಕೇವಲ ಸಿಟಿ ರವಿಯವರಂಥ (CT Ravi) ಬಿಜೆಪಿ ನಾಯಕರ ಸೃಷ್ಟಿ, ಕಾಲ್ಪನಿಕ ವ್ಯಕ್ತಿಗಳನ್ನು ವೈಭವೀಕರಿಸಿ ಅದರ ಮೂಲಕ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭ ಪಡೆಯಲಿಚ್ಛಿಸುತ್ತಿರುವ ಆ ಪಕ್ಷಕ್ಕೆ ಈ ಬಾರಿ ಜನತೆ ಚೆನ್ನಾಗಿ ಪಾಠ ಕಲಿಸಲಿದೆ ಎಂದರು. ಹಾಸನವನ್ನು ಖೈಮಾಬಾದ್ ಅಂತ ರವಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಚಿಕ್ಕಮಗಳೂರು ಶಾಸಕ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯೂ (national secretary) ಆಗಿರುವುದರಿಂದ ಉತ್ತರ ಭಾರತದ ಕಡೆ ಆಗಾಗ ಹೋಗುತ್ತಿರುತ್ತಾರೆ. ಆ ಭಾಗದ ಪ್ರಮುಖ ಆಹಾರ ಪದಾರ್ಥಗಳಲ್ಲೊಂದಾಗಿರುವ ಖೀಮಾ ಅವರ ಮೇಲೆ ತುಂಬಾನೇ ಪ್ರಭಾವ ಬೀರಿದಂತಿದೆ. ಅದರ ಜೊತೆಗೆ ಕತ್ತು ಕೊಯ್ಯುವ ಕೆಲಸ ಕೂಡ ಅಲ್ಲಿ ಜಾಸ್ತಿ ನಡೆಯುತ್ತದೆ. ಅದನ್ನೆಲ್ಲ ನೆನಸಿಕೊಂಡೇ ಅವರು ಹಾಸನವನ್ನು ಖೈಮಾಬಾದ್ ಎಂದಿರಬೇಕು ಅಂತ ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ