ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಬೆಳಗಾವಿಯಲ್ಲಿ ಹೈ ಅಲರ್ಟ್​ ಆದ ಪೊಲೀಸರು

ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಬೆಳಗಾವಿಯಲ್ಲಿ ಹೈ ಅಲರ್ಟ್​ ಆದ ಪೊಲೀಸರು

ವಿವೇಕ ಬಿರಾದಾರ
|

Updated on: Mar 22, 2023 | 2:55 PM

ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಗಡಿನಾಡು ಬೆಳಗಾವಿಯಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಜನ ನಾಯಕರು ಮತದಾರರಿಗೆ ಆಮಿಷಗಳನ್ನು ಒಡ್ಡುತ್ತಿರವ ಹಿನ್ನೆಲೆ ​​ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 60 ಚೆಕ್​ಪೋಸ್ಟ್ ತೆರೆದು ತಪಾಸಣೆ ಮಾಡುತ್ತಿದ್ದಾರೆ.

ಬೆಳಗಾವಿ: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಗಡಿನಾಡು ಬೆಳಗಾವಿಯಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಜನ ನಾಯಕರು ಮತದಾರರಿಗೆ ಆಮಿಷಗಳನ್ನು ಒಡ್ಡುತ್ತಿರವ ಹಿನ್ನೆಲೆ ​​ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 60 ಚೆಕ್​ಪೋಸ್ಟ್ ತೆರೆದು ತಪಾಸಣೆ ಮಾಡುತ್ತಿದ್ದಾರೆ. 25 ಅಂತರ್​ ರಾಜ್ಯ ಚೆಕ್​ಪೋಸ್ಟ್ ನಿರ್ಮಿಸಿ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದು, ಕಳೆದ ಎರಡು ದಿನಗಳಲ್ಲಿ ಸೀರೆ, ನಗದು ಇನ್ನಿತರ ವಸ್ತುಗಳ ಜಪ್ತಿ ಮಾಡಿದ್ದಾರೆ. ದಿನದ 24 ಗಂಟೆಯೂ 3 ಶಿಫ್ಟ್​​ಗಳಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.