H.D.ಕುಮಾರಸ್ವಾಮಿ ಜೊತೆ ಕಾಣಿಸಿಕೊಂಡ ರೌಡಿಶೀಟರ್ ಬಂಡೆ ಮಂಜ; ವಿಡಿಯೋ, ಫೋಟೋ ವೈರಲ್
ಮಾಜಿ MLC ಕಾಂತರಾಜು ಅವರು ಹೆಚ್ಡಿಕೆ ಜೊತೆ ರೌಡಿಶೀಟರ್ ಬಂಡೆ ಮಂಜ ಇರುವ ವಿಡಿಯೋ, ಫೋಟೋ ಬಿಡುಗಡೆ ಮಾಡಿದ್ದಾರೆ.
ನೆಲಮಂಗಲ: ಬಿಜೆಪಿ ಆಯ್ತು ಈಗ ಜೆಡಿಎಸ್ ಸರದಿ. ಮಾಜಿ ಸಿಎಂ H.D.ಕುಮಾರಸ್ವಾಮಿ ಅವರ ಜೊತೆ ಬೆಮೆಲ್ ಕೃಷ್ಣಪ್ಪ ಕೊಲೆ ಕೇಸ್ ಎ2 ಆರೋಪಿ ರೌಡಿಶೀಟರ್ ಬಂಡೆ ಮಂಜ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಮಾಜಿ MLC ಕಾಂತರಾಜು ಅವರು ಹೆಚ್ಡಿಕೆ ಜೊತೆ ರೌಡಿಶೀಟರ್ ಬಂಡೆ ಮಂಜ ಇರುವ ವಿಡಿಯೋ, ಫೋಟೋ ಬಿಡುಗಡೆ ಮಾಡಿದ್ದಾರೆ. ಹಾಗೂ ರೌಡಿಶೀಟರ್ ಬಂಡೆ ಮಂಜುಗೆ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಜೊತೆ ಒಡನಾಟ ಇರುವ ಆರೋಪ ಮಾಡಿದ್ದಾರೆ.
ಜಲಧಾರೆ ಕಾರ್ಯಕ್ರಮದಲ್ಲಿ ಬಂಡೆ ಮಂಜ, HDK ಜೊತೆ ಕಾಣಿಸಿಕೊಂಡಿದ್ದ.ಬಳಿಕ ಗುದ್ದಲಿ ಪೂಜೆ ಕಾರ್ಯಕ್ರಮವೊಂದರಲ್ಲಿ ಶಾಸಕರ ಜೊತೆ ಬಂಡೆ ಮಂಜ ಕಾಣಿಸಿಕೊಂಡಿದ್ದು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ನೆಲಮಂಗಲ ಶಾಸಕ ಒಬ್ಬ ದೊಡ್ಡ ಕಳ್ಳ, ಫ್ರಾಡ್. ಬಿಎಂಎಲ್ ಕೃಷ್ಣಪ್ಪ ಕೊಲೆ ಪ್ರಕರಣ ಆರೋಪಿಗಳೆಲ್ಲ ಶಾಸಕರ ಜೊತೆಯಲ್ಲೇ ಇದ್ದಾರೆ. ನೆಲಮಂಗಲವನ್ನ ರಕ್ತಮಂಗಲವನ್ನಾಗಿಸುತ್ತಿದ್ದಾರೆ ಶಾಸಕರು ಎಂದು ಮಾಜಿ ಎಂಎಲ್‌ಸಿ ಕಾಂತರಾಜು ಶಾಸಕ ಶ್ರೀನಿವಾಸಮೂರ್ತಿ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಕಾಂತರಾಜು ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.