AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijaya Sankalp Yatre; ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಮಾತ್ರ ಸರ್ಕಾರದ ಯೋಜನೆಗಳಿಂದ ಜನಕ್ಕೆ ಉಪಯೋಗವಾಗುತ್ತಿದೆ: ತೇಜಸ್ವೀ ಸೂರ್ಯ

Vijaya Sankalp Yatre; ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಮಾತ್ರ ಸರ್ಕಾರದ ಯೋಜನೆಗಳಿಂದ ಜನಕ್ಕೆ ಉಪಯೋಗವಾಗುತ್ತಿದೆ: ತೇಜಸ್ವೀ ಸೂರ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 22, 2023 | 12:22 PM

Share

ಕಾಂಗ್ರೆಸ್ ಶಾಸಕರಿರುವ ಪಕ್ಕದ ಕಂಪ್ಲಿಯಲ್ಲಿ ಯಾಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಿರುವ ಹಲವಾರು ಯೋಜನೆಗಳು ಜಾರಿಗೆ ಬಂದಿಲ್ಲ ಎಂದು ಸಂಸದರು ಪ್ರಶ್ನಿಸಿದರು.

ಬಳ್ಳಾರಿ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ (Vijaya Sankalp Yatre) ಭಾಗವಾಗಿ ಇಂದು ಬಳ್ಳಾರಿಯಲ್ಲಿ ಸಮಾವೇಶವೊಂದನ್ನು ಉದ್ದೇಶಿಸಿ ಮಾತಾಡಿದ ಸಂಸದ ತೇಜಸ್ವೀ ಸೂರ್ಯ (Tejasvi Surya) ಜಿಲ್ಲೆಯ ಕಾಂಗ್ರೆಸ್ ಶಾಸಕರ ಮೇಲೆ ಹರಿಹಾಯ್ದರು. ಗಂಗಾವತಿ (Gangavati) ಕ್ಷೇತ್ರದಲ್ಲಿ ಆಯಷ್ಮಾನ್ ಭಾರತ್ ಯೋಜನೆ ಅಡಿ ಸುಮಾರು 24, 500 ಫಲಾನುಭವಿಗಳಿದ್ದಾರೆ. ಜಲಜೀವನ್ ಮಿಶನ್ ಯೋಜನೆ ಅಡಿ ಸಾವಿರಾರು ಮನೆಗಳಿಗೆ ನೀರಿನ ಸೌಕರ್ಯ ಒದಗಿಸಲಾಗಿದೆ. ಆದರೆ ಕಾಂಗ್ರೆಸ್ ಶಾಸಕರಿರುವ ಪಕ್ಕದ ಕಂಪ್ಲಿಯಲ್ಲಿ ಯಾಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಿರುವ ಹಲವಾರು ಯೋಜನೆಗಳು ಜಾರಿಗೆ ಬಂದಿಲ್ಲ ಎಂದು ಅವರು ಪ್ರಶ್ನಿಸಿದರು. ಕಾಂಗ್ರೆಸ್ ಶಾಸಕರಿಗೆ ತಮ್ಮ ಕ್ಷೇತ್ರದ ಜನರು ನೆಮ್ಮದಿಯಿಂದ ಬದುಕುವುದು ಬೇಕಿಲ್ಲ ಎಂದು ಸಂಸದರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ