ಭಾರತದ ಡಿಜಿಟಲ್​ ಆರೋಗ್ಯ ಮಿಷನ್​​ಗೆ ಬಿಲ್​ಗೇಟ್ಸ್​​ರಿಂದ ಶ್ಲಾಘನೆ​ ​; ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್​​

ಭಾರತದ ಡಿಜಿಟಲ್​ ಆರೋಗ್ಯ ಮಿಷನ್​​ಗೆ ಬಿಲ್​ಗೇಟ್ಸ್​​ರಿಂದ ಶ್ಲಾಘನೆ​ ​; ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್​​
ಪ್ರಧಾನಿ ಮೋದಿ ಮತ್ತು ಬಿಲ್​ಗೇಟ್ಸ್​

ಪ್ರಧಾನಿ ಮೋದಿ ಸೋಮವಾರ ಆಯುಷ್ಮಾನ್ ಭಾರತ್ ಡಿಜಿಟಲ್​ ಮಿಷನ್​​ನ್ನು ರಾಷ್ಟ್ರಕ್ಕೆ ಅರ್ಪಿಸಿದ್ದಾರೆ. ಈ ಯೋಜನೆಯಡಿ ರಾಷ್ಟ್ರಾದ್ಯಂತ ಪ್ರತಿ ಭಾರತೀಯನಿಗೂ ಒಂದು ಆರೋಗ್ಯ ಐಡಿ ನೀಡಲಾಗುತ್ತದೆ.

TV9kannada Web Team

| Edited By: Lakshmi Hegde

Sep 30, 2021 | 10:18 AM

ಭಾರತದಲ್ಲಿ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡ ಆಯುಷ್ಮಾನ್ ಭಾರತ್​ ಡಿಜಿಟಲ್​ ಆರೋಗ್ಯ ಮಿಷನ್​ ಅಂದರೆ ಡಿಜಿಟಲ್​ ಆರೋಗ್ಯ ಐಡಿ (Digital Health ID System) ವ್ಯವಸ್ಥೆಯನ್ನು ಬಿಲಿಯನೇರ್​​ ಬಿಲ್​ಗೇಟ್ಸ್​ ಶ್ಲಾಘಿಸಿದ್ದಾರೆ.  ಟ್ವೀಟ್​ ಮಾಡಿರುವ ಬಿಲ್​ಗೇಟ್ಸ್ (Bill Gates)​, ಆಯುಷ್ಮಾನ್ ಭಾರತ್​ ಡಿಜಿಟಲ್​ ಮಿಷನ್(Ayushman Bharat Digital Mission)​​ಗೆ ಚಾಲನೆ ನೀಡಿದ ಪ್ರಧಾನಿ ಮೋದಿ (PM Narendra Modi)ಯವರು ಅಭಿನಂದನಾರ್ಹರು. ಈ ಡಿಜಿಟಲ್​ ಆರೋಗ್ಯ ಮೂಲಸೌಕರ್ಯ ಜನರಿಗೆ ನ್ಯಾಯಯುತವಾದ, ಕೈಗೆಟಕಬಹುದಾದ ಆರೋಗ್ಯ ವ್ಯವಸ್ಥೆಯನ್ನು ಒದಗಿಸುತ್ತದೆ. ಹಾಗೇ, ಭಾರತದ ಆರೋಗ್ಯ ಕ್ಷೇತ್ರದ ಸುಧಾರಣೆಯ ಗುರಿಯಲ್ಲಿ ಇನ್ನಷ್ಟು ಪ್ರಗತಿ ತರುತ್ತದೆ ಎಂದು ಹೇಳಿದ್ದಾರೆ.  

ಇನ್ನು ಬಿಲ್​ಗೇಟ್ಸ್​ ಅವರ ಟ್ವೀಟ್​ಗೆ ಪ್ರತಿ ಟ್ವೀಟ್​ ಮಾಡಿದ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. ಆಯಷ್ಮಾನ್ ಭಾರತ್​ ಡಿಜಿಟಲ್​ ಮಿಷನ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ನಿಮಗೆ ಧನ್ಯವಾದಗಳು. ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು ತಂತ್ರಜ್ಞಾನ ಸದುಪಯೋಗಪಡಿಸಿಕೊಳ್ಳಲು ಅಪಾರ ಅವಕಾಶವಿದೆ ಮತ್ತು ಭಾರತವೂ ಇದೇ ದಿಸೆಯಲ್ಲಿ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಸೋಮವಾರ ಆಯುಷ್ಮಾನ್ ಭಾರತ್ ಡಿಜಿಟಲ್​ ಮಿಷನ್​​ನ್ನು ರಾಷ್ಟ್ರಕ್ಕೆ ಅರ್ಪಿಸಿದ್ದಾರೆ. ಈ ಯೋಜನೆಯಡಿ ರಾಷ್ಟ್ರಾದ್ಯಂತ ಪ್ರತಿ ಭಾರತೀಯನಿಗೂ ಒಂದು ಆರೋಗ್ಯ ಐಡಿ ನೀಡಲಾಗುತ್ತದೆ. ಅದರಲ್ಲಿ ಆಯಾ ನಾಗರಿಕನ ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳೂ ಇರಲಿವೆ. ಯೋಜನೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಡಿಜಿಟಲ್​ ಮಿಷನ್​ನಿಂದ ಆಸ್ಪತ್ರೆಗಳಲ್ಲಿ ಕೆಲಸಗಳು ಸರಳೀಕರಣಗೊಳ್ಳುವ ಜತೆಗೆ, ಸಾಮಾನ್ಯ ಜನರಿಗೂ ಅನುಕೂಲ ಹೆಚ್ಚು ಮಾಡುತ್ತವೆ. ಈ ಯೋಜನೆಯಡಿ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಒಂದು ಆರೋಗ್ಯ ಐಡಿ ಸಿಗುತ್ತದೆ. ಅದರಲ್ಲಿರುವ ದಾಖಲೆಗಳನ್ನು ಡಿಜಿಟಲಿ ಸಂರಕ್ಷಿಸಲಾಗುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: Digital Health Mission 2021: ಆರೋಗ್ಯ ಕ್ಷೇತ್ರ ಸುಧಾರಣೆಯ ಅತ್ಯಂತ ಮಹತ್ವದ ಘಟ್ಟ ಈ ಡಿಜಿಟಲ್​ ಹೆಲ್ತ್​ ಮಿಷನ್​: ಪ್ರಧಾನಿ ಮೋದಿ

Digital Health ID Card 2021: ಡಿಜಿಟಲ್ ಹೆಲ್ತ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ವಿವರ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada