ಈ ಬ್ಯಾಂಕ್ ಎಟಿಎಂ ಕೇಂದ್ರಗಳ ಸೇವೆ ನಾಳೆ ಅಕ್ಟೋಬರ್​ 1ರಿಂದ ಬಂದ್! ಕಾರಣವೇನು? ವಿವರ ಇಲ್ಲಿದೆ

ಬ್ಯಾಂಕ್​​ ಗ್ರಾಹಕರಿಗೆ ಎಟಿಎಂ ಕೇಂದ್ರಗಳು ಅತ್ಯಾಪ್ತ ಸ್ನೇಹಿತನಾಗಿ ಯಾವುದೋ ಕಾಲವಾಗಿದೆ. ಅದಿಲ್ಲದೆ ಬ್ಯಾಂಕ್​ ವಹಿವಾಟು ಕಷ್ಟಕಷ್ಟ ಎನ್ನುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ ಒಂದು ಬ್ಯಾಂಕ್ ತನ್ನ ಎಟಿಎಂ ಯಂತ್ರಗಳ ಸೇವೆಯನ್ನು ಬಂದ್ ಮಾಡಲು ಹೊರಟಿದೆ. ವಿವರ ಇಲ್ಲಿದೆ:

ಈ ಬ್ಯಾಂಕ್ ಎಟಿಎಂ ಕೇಂದ್ರಗಳ ಸೇವೆ ನಾಳೆ ಅಕ್ಟೋಬರ್​ 1ರಿಂದ ಬಂದ್! ಕಾರಣವೇನು? ವಿವರ ಇಲ್ಲಿದೆ
ನಾಳೆ ಅಕ್ಟೋಬರ್​ 1ರಿಂದ ಈ ಬ್ಯಾಂಕ್ ಎಟಿಎಂ ಯಂತ್ರಗಳು ಸೇವೆ ಬಂದ್! ವಿವರ ಇಲ್ಲಿದೆ
Follow us
| Updated By: ಸಾಧು ಶ್ರೀನಾಥ್​

Updated on:Sep 30, 2021 | 9:57 AM

ಮುಂಬೈ: ಬ್ಯಾಂಕ್​​ ಗ್ರಾಹಕರಿಗೆ ಎಟಿಎಂ ಕೇಂದ್ರಗಳು ಅತ್ಯಾಪ್ತ ಸ್ನೇಹಿತನಾಗಿ ಯಾವುದೋ ಕಾಲವಾಗಿದೆ. ಅದಿಲ್ಲದೆ ಬ್ಯಾಂಕ್​ ವಹಿವಾಟು ಕಷ್ಟಕಷ್ಟ ಎನ್ನುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ ಒಂದು ಬ್ಯಾಂಕ್ ತನ್ನ ಎಟಿಎಂ ಯಂತ್ರಗಳ ಸೇವೆಯನ್ನು ಬಂದ್ ಮಾಡಲು ಹೊರಟಿದೆ. ವಿವರ ಇಲ್ಲಿದೆ: ಹೌದು ನಾಳೆ ಅಕ್ಟೋಬರ್​ 1ರಿಂದ ಸೂರ್ಯೋದಯ್ ಸ್ಮಾಲ್​ ಫಿನಾನ್ಸ್ ಬ್ಯಾಂಕ್ (Suryoday Small Finance Bank) ತನ್ನ ಎಟಿಎಂ ಯಂತ್ರಗಳು (ATMs) ಮೂಲಕ ಡೆಬಿಟ್​ ಕಾರ್ಡ್​ ಮತ್ತು ಕ್ರೆಡಿಟ್​ ಕಾರ್ಡ್​ಗಳ ವಹಿವಾಟನ್ನು ಸ್ಥಗಿತಗೊಳಿಸಲಿದೆ.

ಕೋವಿಡ್​ 19 (Covid 19) ಅವಕೃಪೆಯಿಂದಾಗಿ 2021 ಜೂನ್​ 30 ರ ತ್ರೈಮಾಸಿಕ ವರದಿಯಲ್ಲಿ 48 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಅದಕ್ಕೂ ಮುನ್ನ ವರ್ಷದ ಹಿಂದೆ 27 ಕೋಟಿ ರೂಪಾಯಿ ನಷ್ಟಕ್ಕೊಳಗಾಗಿತ್ತು.

ಸೂರ್ಯೋದಯ್ ಸ್ಮಾಲ್​ ಫಿನಾನ್ಸ್ ಬ್ಯಾಂಕ್ (SSF Bank) ಷೆಡ್ಯೂಲ್ಡ್​ ಕಮರ್ಷಿಯಲ್​ ಬ್ಯಾಂಕ್​ ಆಗಿದ್ದು 2017ರಿಂದ ಸೇವೆ ಒದಗಸುತ್ತಿದೆ. 13 ರಾಜ್ಯಗಳಲ್ಲಿ ಇದರ ಕಾರ್ಯಚಟುವಟಿಕೆ ವಿಸ್ತರಿಸಿದೆ. 555 ಬ್ಯಾಂಕ್​ ಬ್ರಾಂಚ್​​ಗಳು ಸೇವೆ ಒದಗಿಸುತ್ತಿವೆ. ಮಹಾರಾಷ್ಟ್ರ, ತಮುಳುನಾಡು ಮತ್ತು ಒಡಿಶಾ ರಾಜ್ಯಗಳಲ್ಲಿ ಹೆಚ್ಚಾಗಿ ಕಾರ್ಯಗತವಾಗಿದೆ.

ಕಾರ್ಯಕಾರಿ ಕಾರಣಗಳಿಂದಾಗಿ (operational reasons) ಈ ನಿರ್ಧಾರಕ್ಕೆ ಬರಲಾಗಿದೆ. ಆದರೂ SSF Bank ಬ್ಯಾಂಕ್​​ ಗ್ರಾಹಕರು ತಮ್ಮ ATM/Debit card ಗಳನ್ನು ಇತರೆ ಬ್ಯಾಂಕ್​​ಗಳ ATM ಕೇಂದ್ರಗಳಲ್ಲಿ ಬಳಕೆ ಮಾಡಬಹುದು ಎಂದು ಬ್ಯಾಂಕ್​ ತನ್ನ ವೆಬ್​ಸೈಟ್​​ನಲ್ಲಿ ತಿಳಿಸಿದೆ. ಆದರೂ SSF Bank ಬ್ಯಾಂಕ್​ನ ಇತರೆ ಇಂಟರ್ನೆಟ್​ ಬ್ಯಾಂಕಿಂಗ್​ ಸೇವೆಗಳು ಅಬಾಧಿತವಾಗಿ ಮುಂದುವರಿಯಲಿದೆ.

SSF Bank ಬ್ಯಾಂಕ್ ಕಳೆದ ತಿಂಗಳು ತನ್ನ ಷೇರುದಾರರ ಸಾಮಾನ್ಯ ಸಭೆಯಲ್ಲಿ ವಾರ್ಷಿಕ ವರದಿ ಮಂಡಿಸುವಾಗ ಭವಿಷ್ಯದಲ್ಲಿ ತನ್ನ ಗ್ರಾಹಕರಿಗೆ ಇನ್ನೂ ಹೆಚ್ಚಿನ ಮೌಲ್ಯಯುತ ಸೇವೆ ಒದಗಿಸಿವಂತಾಗಲು ಈ ನಿರ್ಣಾಯ ಅನಿವಾರ್ಯ ಎಂದು ತಿಳಿಸಿತ್ತು.

ಇದನ್ನೂ ಓದಿ: ATM cash: ಸಮಯಕ್ಕೆ ಸರಿಯಾಗಿ ಹಣ ತುಂಬದೆ ಎಟಿಎಂ ಖಾಲಿಯಿದ್ದಲ್ಲಿ ಬ್ಯಾಂಕ್​ಗಳಿಗೆ 10 ಸಾವಿರ ರೂ. ದಂಡ ಇದನ್ನೂ ಓದಿ: SBI ATM: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 873 ಎಟಿಎಂಗಳಿಗೆ ಬಾಗಿಲು

Published On - 9:49 am, Thu, 30 September 21

ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?