ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜಮ್ಮು ಪ್ರವಾಸ ಇಂದಿನಿಂದ; ವಿಶೇಷ ಸ್ಥಾನಮಾನ ರದ್ದು ಬಳಿಕ ಮೊದಲ ಬಾರಿಗೆ ಭೇಟಿ
Mohan Bhagwat: ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಬೇಕು ಎಂಬುದು ಆರ್ಎಸ್ಎಸ್ನ ಬಹುದಿನಗಳ ಬೇಡಿಕೆಯಾಗಿತ್ತು. ಅದರಂತೆ 2019ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದನ್ನು ರದ್ದುಗೊಳಿಸಿದೆ.
ಜಮ್ಮು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಅವರು ಇಂದಿನಿಂದ ನಾಲ್ಕು ದಿನಗಳ ಕಾಲ ಜಮ್ಮು ಪ್ರವಾಸ ಹಮ್ಮಿಕೊಂಡಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ 2019ರಲ್ಲಿ ವಿಶೇಷ ಸ್ಥಾನಮಾನ (ಆರ್ಟಿಕಲ್ 370 ಮತ್ತು 35 ಎ) ನ್ನು ರದ್ದುಗೊಳಿಸಿದ ಮೇಲೆ ಇದೇ ಮೊದಲ ಬಾರಿಗೆ ಮೋಹನ್ ಭಾಗವತ್ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅಂದರೆ 2016ರಲ್ಲಿ ಭೇಟಿ ನೀಡಿದ ಬಳಿಕ ಅವರು ಮತ್ತೆ ಅಲ್ಲಿಗೆ ಹೋಗಿರಲಿಲ್ಲ. ಈ ನಾಲ್ಕು ದಿನಗಳ ಪ್ರವಾಸದಲ್ಲಿ ಮೋಹನ್ ಭಾಗವತ್ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಕ್ಟೋಬರ್ 2ರಂದು ಭಾಗವತ್ ಜಮ್ಮುವಿನ ಜೋರಾವರ್ ಸಿಂಗ್ ಸಭಾಂಗಣದಲ್ಲಿ ಸೆಮಿನಾರ್ನಲ್ಲಿ ಮಾತನಾಡುವರು. ನಂತರ ಜಮ್ಮು-ಕಾಶ್ಮೀರದಲ್ಲಿ, ಶಿಕ್ಷಣ, ಸಾರ್ವಜನಿಕ ಜಾಗೃತಿ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಪರಿಸರ ವಿಜ್ಞಾನ, ಜಲ ಸಂರಕ್ಷಣೆ, ಸಾಮಾಜಿಕ ಸಮಾನತೆ ಸೇರಿ ಹಲವು ಕ್ಷೇತ್ರಗಳಲ್ಲಿ ಆರ್ಎಸ್ಎಸ್ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದು, ಅದರ ಪ್ರಗತಿ ಪರಿಶೀಲನೆಯನ್ನು ನಡೆಸಲಿದ್ದಾರೆ.
ಆರ್ಎಸ್ಎಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತು ಅಕ್ಟೋಬರ್ 3ರಂದು ಮೋಹನ್ ಭಾಗವತ್ ಅವರು ಜಮ್ಮವಿನಲ್ಲಿ ಆರ್ಎಸ್ಎಸ್ ಪ್ರಚಾರಕ್ಗಳ ಜತೆಗೆ ಸಭೆ ನಡೆಸಲಿದ್ದು, ಅಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಆರ್ಎಸ್ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇನ್ನುಬರುವವರ್ಷ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಬಗ್ಗೆ ಕೂಡ ಯೋಜನಾಧಿಕಾರಿಗಳೊಂದಿಗೆ ಮೋಹನ್ ಭಾಗವತ್ ಚರ್ಚಿಸಲಿದ್ದಾರೆ ಎಂದೂ ಹೇಳಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಬೇಕು ಎಂಬುದು ಆರ್ಎಸ್ಎಸ್ನ ಬಹುದಿನಗಳ ಬೇಡಿಕೆಯಾಗಿತ್ತು. ಅದರಂತೆ 2019ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದನ್ನು ರದ್ದುಗೊಳಿಸಿದೆ. ನಂತರ ಜಮ್ಮು-ಕಾಶ್ಮೀರ ಮತ್ತು ಲಡಾಕ್ನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿದೆ. ಈ ನಿರ್ಧಾರವನ್ನು ಅತ್ಯಂತ ಖುಷಿಯಿಂದ ಸ್ವಾಗತಿಸಿದ್ದ ಆರ್ಎಸ್ಎಸ್ ಪ್ರಧಾನಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ, ರಾಜ್ಯದ ಏಕೀಕರಣದ ಕನಸು ಈಗ ಸಾಕಾರಗೊಂಡಿದೆ ಎಂದು ಹೇಳಿದ್ದರು.
ಇದನ್ನೂ ಓದಿ: Shocking Video: ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆಯೇ ತಲೆ ಕೂದಲಿಗೆ ಆವರಿಸಿಕೊಂಡ ಬೆಂಕಿ; ಮಹಿಳೆ ಕಂಗಾಲು
ಯಡಿಯೂರಪ್ಪ ಆಪ್ತರಿಗೆ ಆಯಕಟ್ಟಿನ ಸ್ಥಾನಮಾನ: ಮುಖ್ಯಮಂತ್ರಿ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿಗಳಾಗಿ ಇಬ್ಬರ ನೇಮಕ