ಭವಾನಿಪುರದಲ್ಲಿ ಮತಯಂತ್ರ ಸ್ಥಗಿತಗೊಳಿಸಿದ ಟಿಎಂಸಿ ಶಾಸಕ; ಬಿಜೆಪಿ ಅಭ್ಯರ್ಥಿಯಿಂದ ಆರೋಪ

West Bengal By Polls: ಇನ್ನು ಸಂಸರ್‌ಗಂಜ್​​ನಲ್ಲಿ ಮುಂಜಾನೆ ಬಾಂಬ್​ ದಾಳಿ ಆಗಿದೆ ಎಂದು ಕಾಂಗ್ರೆಸ್​ ನಾಯಕ ಜೈದುರ್​ ರೆಹಮಾನ್​ ಆರೋಪಿಸಿದ್ದಾರೆ. ಬಾಂಬ್​ ದಾಳಿಯ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ

ಭವಾನಿಪುರದಲ್ಲಿ ಮತಯಂತ್ರ ಸ್ಥಗಿತಗೊಳಿಸಿದ ಟಿಎಂಸಿ ಶಾಸಕ; ಬಿಜೆಪಿ ಅಭ್ಯರ್ಥಿಯಿಂದ ಆರೋಪ
ಪ್ರಿಯಾಂಕಾ ಟಿಬ್ರೆವಾಲ್​
Follow us
TV9 Web
| Updated By: Lakshmi Hegde

Updated on:Sep 30, 2021 | 9:06 AM

ಇಂದು ಪಶ್ಚಿಮ ಬಂಗಾಳದಲ್ಲಿ ಭವಾನಿಪುರ ಸೇರಿ ಒಟ್ಟು ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು ಮತದಾನ ಶುರುವಾಗಿದೆ. ಅದರಲ್ಲೂ ಭವಾನಿಪುರದ ಮೇಲೆ ಎಲ್ಲರ ಕಣ್ಣು. ಇಲ್ಲಿ ಟಿಎಂಸಿಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದು, ಅವರ ವಿರುದ್ಧ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್​ ಕಣಕ್ಕೆ ಇಳಿದಿದ್ದಾರೆ.  ಈ ಮಧ್ಯೆ ಮತದಾನ ಶುರುವಾದ ಕೆಲವೇ ಹೊತ್ತಲ್ಲಿ ಪ್ರಿಯಾಂಕಾ ಟಿಬ್ರೆವಾಲ್​ ಟಿಎಂಸಿ ಶಾಸಕ ಮದನ್​ ಮಿತ್ರಾ ವಿರುದ್ಧ ಆರೋಪ ಮಾಡಿದ್ದಾರೆ. ಮದನ್​ ಮಿತ್ರಾ, ಭವಾನಿಪುರದ ವಾರ್ಡ್​ ನಂ.72ರಲ್ಲಿ ಮತಯಂತ್ರಗಳನ್ನು ಬಲವಂತವಾಗಿ ಬಂದ್​ ಮಾಡಿಸುತ್ತಿದ್ದಾರೆ. ಇಡೀ ಮತಗಟ್ಟೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.  

ಭವಾನಿಪುರಕ್ಕೆ ಬೆಳಗ್ಗೆಯೇ ಆಗಮಿಸಿರುವ ಪ್ರಿಯಾಂಕಾ ಟಿಬ್ರೆವಾಲ್​, ಮದನ್ ಮಿತ್ರಾ ಉದ್ದೇಶಪೂರ್ವಕವಾಗಿಯೇ ಮತಯಂತ್ರಗಳನ್ನು ಬಂದ್​ ಮಾಡಿಸುತ್ತಿದ್ದಾರೆ. ಪಶ್ಚಿಮಬಂಗಾಳ ಟಿಎಂಸಿ ಸರ್ಕಾರ ಹೆದರಿಕೆಯಲ್ಲಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.  ಇನ್ನು ಇಂದು ಮುಂಜಾನೆ 7ಗಂಟೆಯಿಂದಲೇ ಪಶ್ಚಿಮ ಬಂಗಾಳದ ಸಂಸರ್‌ಗಂಜ್, ಜಂಗೀಪುರ ಮತ್ತು ಭವಾನೀಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಎಲ್ಲ ರೀತಿಯ ಕೊವಿಡ್​ 19 ಶಿಷ್ಟಾಚಾರಗಳನ್ನು ಪಾಲಿಸಲಾಗುತ್ತಿದ್ದು ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಬಾಂಬ್​ ದಾಳಿ ಇನ್ನು ಸಂಸರ್‌ಗಂಜ್​​ನಲ್ಲಿ ಮುಂಜಾನೆ ಬಾಂಬ್​ ದಾಳಿ ಆಗಿದೆ ಎಂದು ಕಾಂಗ್ರೆಸ್​ ನಾಯಕ ಜೈದುರ್​ ರೆಹಮಾನ್​ ಆರೋಪಿಸಿದ್ದಾರೆ. ಬಾಂಬ್​ ದಾಳಿಯ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ ಎನ್ನಲಾಗಿದ್ದು, ಘಟನೆಯ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.  ಪಶ್ಚಿಮಬಂಗಾಳದಲ್ಲಿ ಚುನಾವಣೆ ಎಂದರೇ ಹಿಂಸಾಚಾರದ ಇನ್ನೊಂದು ರೂಪ ಎಂಬಂತಾಗಿದೆ. ಹೀಗಾಗಿ ಈ ಉಪಚುನಾವಣೆಗೂ ತುಸು ಜಾಸ್ತಿಯೇ ಭದ್ರತೆ ಕಲ್ಪಿಸಲಾಗಿದೆ. ಮೂರು ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 72 ಕಂಪನಿ ಕೇಂದ್ರ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ. ಅದರಲ್ಲಿ ಭವಾನಿ ಪುರ ಒಂದರಲ್ಲೇ 35 ಭವಾನಿಪುರದಲ್ಲೇ ಇವೆ.

ಇದನ್ನೂ ಓದಿ: Shocking Video: ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆಯೇ ತಲೆ ಕೂದಲಿಗೆ ಆವರಿಸಿಕೊಂಡ ಬೆಂಕಿ; ಮಹಿಳೆ ಕಂಗಾಲು

10 ಕೋಟಿ ರೂ. ಖರ್ಚಿನಲ್ಲಿ ಆದ ಮದುವೆಯ ವ್ಯಾಲಿಡಿಟಿ 4 ವರ್ಷ ಮಾತ್ರವೇ? ಅ.6ಕ್ಕೆ ಸಮಂತಾ-ನಾಗ ಚೈತನ್ಯ ಭವಿಷ್ಯ ನಿರ್ಧಾರ

Published On - 8:59 am, Thu, 30 September 21