Meghalaya: ಮಧ್ಯರಾತ್ರಿ ನದಿಗೆ ಬಿದ್ದ ಬಸ್​; ಚಾಲಕ ಸೇರಿ 6 ಮಂದಿ ದುರ್ಮರಣ, 16 ಪ್ರಯಾಣಿಕರ ರಕ್ಷಣೆ

ಬಸ್​ ನದಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡ ಅಲ್ಲಿಗೆ ಧಾವಿಸಿ, ಪ್ರಯಾಣಿಕರಿಗೆ ಸಹಾಯ ಮಾಡಿದೆ. ಆದರೂ ಆರು ಮಂದಿ ಮೃತಪಟ್ಟಿದ್ದಾರೆ.

Meghalaya: ಮಧ್ಯರಾತ್ರಿ ನದಿಗೆ ಬಿದ್ದ ಬಸ್​; ಚಾಲಕ ಸೇರಿ 6 ಮಂದಿ ದುರ್ಮರಣ, 16 ಪ್ರಯಾಣಿಕರ ರಕ್ಷಣೆ
ಮೇಘಾಲಯದಲ್ಲಿ ನದಿಗೆ ಬಿದ್ದ ಬಸ್​
Follow us
TV9 Web
| Updated By: Lakshmi Hegde

Updated on: Sep 30, 2021 | 9:56 AM

ಮೇಘಾಲಯದ ಶಿಲ್ಲಾಂಗ್​​ನಲ್ಲಿ ಬಸ್​​ವೊಂದು ನದಿಗೆ ಬಿದ್ದು ಆರು ಮಂದಿ ಮೃತಪಟ್ಟ ದುರ್ಘಟನೆ ನಡೆದಿದೆ. ಈ ಬಸ್ ನಿನ್ನೆ ರಾತ್ರಿ​ ತುರಾದಿಂದ ಶಿಲ್ಲಾಂಗ್​​ಗೆ ಹೋಗುತ್ತಿತ್ತು..ಇದರಲ್ಲಿ ಸುಮಾರು 21 ಮಂದಿ ಪ್ರಯಾಣಿಕರು ಇದ್ದರು. ಮಧ್ಯರಾತ್ತಿ 12 ಗಂಟೆಹೊತ್ತಿಗೆ ನೊಂಗ್​ಚ್ರಾಮ್​ ಬಳಿ ರಿಂಗ್ಡಿ ನದಿಗೆ ಬಿದ್ದಿದೆ. ಬಸ್​ ನದಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡ ಅಲ್ಲಿಗೆ ಧಾವಿಸಿ, ಪ್ರಯಾಣಿಕರಿಗೆ ಸಹಾಯ ಮಾಡಿದೆ. ಆದರೆ ಸುಮಾರು 6 ಮಂದಿ ಜೀವ ಕಳೆದುಕೊಂಡಿದ್ದಾರೆ. ಎಂದು ವರದಿಯಾಗಿದೆ.  

ಇದುವರೆಗೆ 16 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಅವರನ್ನೆಲ್ಲ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.  ಈ ಬಸ್​​ನಲ್ಲಿ ಚಾಲಕ ಸೇರಿ ಒಟ್ಟು 22 ಮಂದಿ ಇದ್ದರು. ಬಸ್ ಚಾಲಕ ಮೃತಪಟ್ಟಿದ್ದಾಗಿ ಸ್ಥಳೀಯ ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಆರು ಮೃತದೇಹಗಳಲ್ಲಿ ನಾಲ್ಕನ್ನು ನದಿಯಿಂದ ಹೊರತೆಗೆಯಲಾಗಿದ್ದು, ಇನ್ನೆರಡು ಶವಗಳು ಬಸ್​​ನಲ್ಲಿಯೇ ಸಿಲುಕಿಕೊಂಡಿವೆ. ಅದನ್ನು ಹೊರತೆಗೆಯುವುದು ಸವಾಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಜಮ್ಮು ಪ್ರವಾಸ ಇಂದಿನಿಂದ; ವಿಶೇಷ ಸ್ಥಾನಮಾನ ರದ್ದು ಬಳಿಕ ಮೊದಲ ಬಾರಿಗೆ ಭೇಟಿ

ಹದಿನಾರು ಯಂತ್ರಗಳ ಬಳಸಿ ಸ್ವಚ್ಛತಾ ಅಭಿಯಾನ ಶುರು, ಮತ್ತಷ್ಟು ಕಣ್ಮನ ತಣಿಸಲಿದೆ ಆಕರ್ಷಕ ದಾಲ್ ಸರೋವರ! ನೀವೂ ನೋಡಿ