Gambling: ಮಂಡ್ಯ ಜಿಲ್ಲೆಯಲ್ಲಿ ಯುಗಾದಿ ಹಬ್ಬವನ್ನು ನೆಪವಾಗಿಟ್ಟುಕೊಂಡು ಜೂಜಾಟದಲ್ಲಿ ತೊಡಗಿದರೆ ಕಠಿಣ ಕ್ರಮ, ಎಸ್ ಪಿ ಎಚ್ಚರಿಕೆ
ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎನ್ ಸತೀಶ್, ನಾಗರಿಕರು ಜೂಜಾಟದಲ್ಲಿ ತೊಡಗಿದ್ದು ಕಂಡುಬಂದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದೆಂದು ಮೈಕ್ ಮೂಲಕ ತಮ್ಮ ಸಿಬ್ಬಂದಿಯಿಂದ ಅನೌನ್ಸ್ ಮಾಡಿಸುತ್ತಿದ್ದಾರೆ.
ಮಂಡ್ಯ: ಇದು ನಿಜಕ್ಕೂ ಒಳ್ಳೆಯ ಕ್ರಮ ಮಾರಾಯ್ರೇ. ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಯುಗಾದಿ ಹಬ್ಬದ (Ugadi Festival) ಸಂದರ್ಭದಲ್ಲಿ ಜೂಜಾಡುತ್ತಾರೆ (gambling). ಈ ಆಟದಲ್ಲಿ ಹಣ ಗೆದ್ದವನು ಬೀಗುತ್ತಾ ಮನೆಗೆ ಹೋಗಿ ಹೆಂಡತಿ ಮಕ್ಕಳೊಂದಿಗೆ ಹಬ್ಬದೂಟ ಸವಿಯತ್ತಾನೆ. ಅದರೆ ಸೋತವನು ಹ್ಯಾಪುಮೋರೆ ಹಾಕ್ಕೊಂಡು ತನ್ನದಲ್ಲದೆ ಮನೆಯಲ್ಲಿರುವವರೆಲ್ಲರ ಮೂಡು, ಸಂಭ್ರಮ ಹಾಳುಮಾಡುತ್ತಾನೆ. ಮಂಡ್ಯ ಜಿಲ್ಲಾ ಪೊಲೀಸ್ ಜಿಲ್ಲೆಯಾದ್ಯಂತ ಇಂದು ಮತ್ತು ನಾಳೆ ಇಸ್ಪೀಟ್ ಆಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎನ್ ಸತೀಶ್ (N Satish), ನಾಗರಿಕರು ಜೂಜಾಟದಲ್ಲಿ ತೊಡಗಿದ್ದು ಕಂಡುಬಂದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದೆಂದು ಮೈಕ್ ಮೂಲಕ ತಮ್ಮ ಸಿಬ್ಬಂದಿಯಿಂದ ಅನೌನ್ಸ್ ಮಾಡಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
https://www.youtube.com/@tv9kannada/videos

