ಕಾಂಗ್ರೆಸ್ ಯುವರಾಜ ರಾಹುಲ್ ಚಿತ್ರದುರ್ಗದಿಂದ ದಾವಣಗೆರೆ ತಲುಪಲು ಬಹಳ ಪ್ರಯಾಸ ಪಡಬೇಕಾಯಿತು!
ಸುರಿಯುತ್ತಿದ್ದ ಮಳೆ, ಅಪರಿಮಿತ ಸಂಖ್ಯೆಯ ವಾಹನಗಳು ಮತ್ತು ಜನರಿಂದಾಗಿ ದಾವಣಗೆರೆಗೆ ಹೋಗುವ ರಸ್ತೆ ಜಾಮ್ ಆಗಿತ್ತು. ಕಾರ್ಯಕ್ರಮ ನಡೆಯುವ ಸ್ಥಳ ತಲುಪಲು ಅವರು ಹರ ಸಾಹಸ ಪಡಬೇಕಾಯಿತು.
ದಾವಣಗೆರೆ: ಕಾಂಗ್ರೆಸ್ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ (Rahul Gandhi) ಸಿದ್ದರಾಮೋತ್ಸವದಲ್ಲಿ (Siddaramotsava) ಭಾಗವಹಿಸಲು ದಾವಣಗೆರೆಗೆ ಆಗಮಿಸಿದ್ದಾರೆ. ಚಿತ್ರದುರ್ಗದಲ್ಲಿ ಶ್ರೀಗಳೊಂದಿಗೆ ಸ್ವಲ್ಪ ಸಮಯ ಕಳೆದು ದಾವಣಗೆರೆಗೆ ಹೊರಟ ಗಾಂಧಿ ಕುಟುಂಬದ ಕುಡಿಯ ಪ್ರಯಾಣ ಸುಖಕರವೇನೂ ಅಗಿರಲಿಲ್ಲ. ಸುರಿಯುತ್ತಿದ್ದ ಮಳೆ, ಅಪರಿಮಿತ ಸಂಖ್ಯೆಯ ವಾಹನಗಳು ಮತ್ತು ಜನರಿಂದಾಗಿ ದಾವಣಗೆರೆಗೆ ಹೋಗುವ ರಸ್ತೆ ಜಾಮ್ ಆಗಿತ್ತು. ಕಾರ್ಯಕ್ರಮ ನಡೆಯುವ ಸ್ಥಳ ತಲುಪಲು ಅವರು ಹರ ಸಾಹಸ ಪಡಬೇಕಾಯಿತು.