ನಿಮಗೆ ಉಗುರು ಕಚ್ಚುವ ದುರಾಭ್ಯಾಸ ಇದೆಯಾ? ಹಾಗಾದ್ರೆ ತಪ್ಪದೆ ಈ ವಿಡಿಯೋ ನೋಡಿ

Updated on: Aug 13, 2024 | 7:15 AM

ಉಗುರುಗಳಲ್ಲಿ ಕೊಳೆ ಸಂಗ್ರಹವಾಗುತ್ತೆ. ಉಗುರುಗಳನ್ನು ಬಾಯಿಯಿಂದ ಕಚ್ಚಿದರೆ, ಹೊಟ್ಟೆಯೊಳಗೆ ರೋಗಾಣುಗಳು ಹೋಗಿ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೆ ಆಧ್ಯಾತ್ಮಿಕದಲ್ಲೂ ಈ ಅಭ್ಯಾಸ ಕೆಟ್ಟದ್ದು ಎಂದು ಹೇಳಲಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ಕೋಪ ಬಂದಾಗ, ಬೇಸರವಾದಾಗ, ಆತಂಕವಿದ್ದಾಗ ಅಥವಾ ಇತರೆ ಸಂದರ್ಭಗಳಲ್ಲಿ ಉಗುರು ಕಚ್ಚುವ ಅಭ್ಯಾಸ ಕೆಲವರಲ್ಲಿರುತ್ತೆ. ಆದರೆ ಈ ಅಭ್ಯಾಸ ಕೆಟ್ಟದ್ದು. ಇದರಿಂದ ನಾನಾ ಪರಿಣಾಮಗಳನ್ನು ನೀವು ಎದುರಿಸಬೇಕಾಗುತ್ತೆ. ಚಿಕ್ಕ ವಯಸ್ಸಿನಲ್ಲಿ ಆರಂಭವಾದ ಈ ಅಭ್ಯಾಸ ದೊಡ್ಡವರಾದ ಮೇಲೂ ಮುಂದುವರೆಯುತ್ತೆ. ಇನ್ನು ಸಾಮಾನ್ಯವಾಗಿ ಉಗುರುಗಳಲ್ಲಿ ಕೊಳೆ ಸಂಗ್ರಹವಾಗಿರುತ್ತದೆ. ಮಕ್ಕಳು ಆ ಉಗುರುಗಳನ್ನು ಬಾಯಿಯಿಂದ ಕಚ್ಚಿದರೆ, ಹೊಟ್ಟೆಯೊಳಗೆ ರೋಗಾಣುಗಳು ಹೋಗುವುದರಿಂದ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಆಧ್ಯಾತ್ಮಿಕದಲ್ಲೂ ಈ ಅಭ್ಯಾಸ ಕೆಟ್ಟದ್ದು ಎಂದು ಹೇಳಲಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow Us
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More