ನನ್ನ ಕುಟುಂಬವೇ ಬೇರೆ, ಹೆಚ್ ಡಿ ರೇವಣ್ಣ ಕುಟುಂಬವೇ ಬೇರೆ, ನಮ್ಮ ವ್ಯವಹಾರಗಳೂ ಬೇರೆ ಬೇರೆ: ಹೆಚ್ ಡಿ ಕುಮಾರಸ್ವಾಮಿ

|

Updated on: Apr 29, 2024 | 5:20 PM

ಪ್ರಜ್ವಲ್ ರೇವಣ್ಣ ಪ್ರಕರಣದ ಜೊತೆ ಹೆಚ್ ಡಿ ದೇವೇಗೌಡರ ಕುಟುಂಬವನ್ನು ಥಳುಕು ಹಾಕಬೇಡಿ, ನಾವೆಲ್ಲ ಬೇರೆಯಾಗಿದ್ದೀವಿ, ಎಲ್ಲರ ವ್ಯವಹಾರಗಳು ಬೇರೆ ಬೇರೆ, ಕೇವಲ ಪಕ್ಷದ ಸಭೆಗಳಲ್ಲಿ ಮಾತ್ರ ಜೊತೆಗೂಡುತ್ತೇವೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ನಿಮಗೆ ನೆನೆಪಿರಬಹುದು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ಪರ ಪ್ರಚಾರ ಮಾಡುವಾಗ ಒಮ್ಮೆ ಕುಮಾರಸ್ವಾಮಿ, ಪ್ರಜ್ವಲ್ ನನ್ನ ಮಗ ಅಂತ ಹೇಳಿದ್ದರು!

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಕೈಯಲ್ಲಿ ಪೆನ್ ಡ್ರೈವ್ ಹಿಡಿದೇ ಸರಕಾರದ ವಿರುದ್ಧ ಆರೋಪಗಳನನ್ನು ಮಾಡುತ್ತಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಈಗ ಪೆನ್ ಡ್ರೈವ್ ವಿರುದ್ಧವೇ ಡ್ರೈವ್ ಮಾಡುತ್ತಿದ್ದಾರೆ! ಶಿವಮೊಗ್ಗದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ವೈಖರಿಯನ್ನು ಗಮನಿಸಿ.  ಹೆಚ್ ಡಿ ರೇವಣ್ಣ (HD Revanna) ಕುಟುಂಬದಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನವನ್ನು ಕುಮಾರಸ್ವಾಮಿ ಮಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಪ್ರಜ್ವಲ್ ರೇವಣ್ಣ ಪ್ರಕರಣದ ಜೊತೆ ಹೆಚ್ ಡಿ ದೇವೇಗೌಡರ (HD Devegowda) ಕುಟುಂಬವನ್ನು ಥಳುಕು ಹಾಕಬೇಡಿ, ನಾವೆಲ್ಲ ಬೇರೆಯಾಗಿದ್ದೀವಿ, ಎಲ್ಲರ ವ್ಯವಹಾರಗಳು ಬೇರೆ ಬೇರೆ, ಕೇವಲ ಪಕ್ಷದ ಸಭೆಗಳಲ್ಲಿ ಮಾತ್ರ ಜೊತೆಗೂಡುತ್ತೇವೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ನಿಮಗೆ ನೆನೆಪಿರಬಹುದು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ಪರ ಪ್ರಚಾರ ಮಾಡುವಾಗ ಒಮ್ಮೆ ಕುಮಾರಸ್ವಾಮಿ, ಪ್ರಜ್ವಲ್ ನನ್ನ ಮಗ ಅಂತ ಹೇಳಿದ್ದರು! ಈಗ ವರ್ಷನ್ ಚೇಂಜ್!!

ಪ್ರಕರಣವನ್ನು ಸರ್ಕಾರ ಎಸ್ಐಟಿ ತನಿಖೆ ಒಪ್ಪಿಸಿದೆ ಎಂದು ಹೇಳಿದ ಕುಮಾರಸ್ವಾಮಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಅದರೆ ಮತದಾನಕ್ಕೆ ಕೇವಲ ಮೂರು ದಿನ ಬಾಕಿಯಿರುವಾಗ ಪೆನ್ ಡ್ರೈವ್ ಗಳನ್ನು ಹಂಚಿದ್ದು ಯಾರೆನ್ನುವುದು ತನಿಖೆಯಾಗಬೇಕಲ್ಲವೇ ಎಂದು ಹೇಳಿದರು. ಇವರು ಒಂದು ಹಂತದಲ್ಲಿ ಬೆಳೆದಿರುವ ಮಕ್ಕಳು ಇಂಥ ತಪ್ಪುಗಳನ್ನು ಮಾಡುತ್ತಾರೆ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ಅನ್ನುತ್ತಾರೆ. ಅಂದರೆ ಅವರು ಪ್ರಜ್ವಲ್ ತಪ್ಪು ಮಾಡಿದ್ದಾರೆ ಅನ್ನೋದನ್ನು ಖಚಿತಪಡಿಸುತ್ತಾರೆಯೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ಪಕ್ಷದಿಂದ ನಿರ್ದಾಕ್ಷಿಣ್ಯ ಕ್ರಮ- ಕುಮಾರಸ್ವಾಮಿ ಹೇಳಿಕೆ

Follow us on