ಪ್ರಜ್ವಲ್ ಎಲ್ಲೇ ಇದ್ದರೂ ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದರೆ ಬರುತ್ತಾನೆ: ಹೆಚ್ ಡಿ ರೇವಣ್ಣ
ನಂತರ ಕಾಂಗ್ರೆಸ್ ಸರ್ಕಾರವನ್ನು ದೂರಿದ ರೇವಣ್ಣ, ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷವು ದೇವೇಗೌಡರ ಕುಟುಂಬದ ವಿರುದ್ಧ ಹಗೆತನ ಸಾಧಿಸುತ್ತಿದೆ, ಇದು ಹೊಸದೇನಲ್ಲ, ಈ ಹಿಂದೆಯೂ ತಮ್ಮ ಕುಟುಂಬದ ವಿರುದ್ಧ ಸಿಐಡಿ, ಸಿಓಡಿ, ಸಿಬಿಐಯಂಥ ಸಂಸ್ಥೆಗಳಿಂದ ತನಿಖೆಗಳನ್ನು ಮಾಡಿಸಲಾಗಿದೆ ಎಂದು ರೇವಣ್ಣ ಹೇಳಿದರು.
ಬೆಂಗಳೂರು: ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹೆಚ್ ಡಿ ರೇವಣ್ಣ (HD Revanna) ಅವರು ತಮ್ಮ ಮಗ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಮಹಿಳೆಯರು ಮಾಡಿರುವ ಆರೋಪ ಮತ್ತು ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಪ್ರಕರಣವನ್ನು ಸರ್ಕಾರ ಈಗಾಗಲೇ ಎಸ್ ಐಟಿ ತನಿಖೆ (SIT investigation) ಒಪ್ಪಿಸಿರುವುದರಿಂದ ತಾನು ಕಾಮೆಂಟ್ ಮಾಡೋದು ಸರಿಯಲ್ಲ ಎಂದರು. ಪ್ರಜ್ವಲ್ ಗೆ ತನ್ನ ವಿರುದ್ಧ ಎಫ್ ಐ ಆರ್ ದಾಖಲಾಗುವ ಬಗ್ಗೆ ಗೊತ್ತಿರಲಿಲ್ಲ, ಅವನೆಲ್ಲೇ ಇದ್ದರೂ ಎಸ್ ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದಾಗ ಬರುತ್ತಾನೆ ಎಂದು ರೇವಣ್ಣ ಹೇಳಿದರು. ನಂತರ ಕಾಂಗ್ರೆಸ್ ಸರ್ಕಾರವನ್ನು ದೂರಿದ ರೇವಣ್ಣ, ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷವು ದೇವೇಗೌಡರ ಕುಟುಂಬದ ವಿರುದ್ಧ ಹಗೆತನ ಸಾಧಿಸುತ್ತಿದೆ, ತಮ್ಮ ಕುಟುಂಬಕ್ಕೆ ಇದು ಹೊಸದೇನಲ್ಲ, ಈ ಹಿಂದೆಯೂ ತಮ್ಮ ಕುಟುಂಬದ ವಿರುದ್ಧ ಸಿಐಡಿ, ಸಿಓಡಿ, ಸಿಬಿಐಯಂಥ ಸಂಸ್ಥೆಗಳಿಂದ ತನಿಖೆಗಳನ್ನು ಮಾಡಿಸಲಾಗಿದೆ ಎಂದು ರೇವಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ಪ್ರಜ್ವಲ್ ರೇವಣ್ಣ ಅನೇಕ ಮಹಿಳೆಯರ ಮೇಲೆ ಬಲತ್ಕಾರ ಮಾಡಿದ್ದಾರೆ: ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ