Daily Devotional: ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?

Updated on: May 10, 2025 | 7:23 AM

ಸನಾತನ ಧರ್ಮದಲ್ಲಿ ಸಿಂಧೂರದ ವಿಶೇಷ ಮಹತ್ವವನ್ನು ಈ ಲೇಖನ ವಿವರಿಸುತ್ತದೆ. ವಿವಾಹಿತ ಮಹಿಳೆಯರ ಸೌಭಾಗ್ಯದ ಸಂಕೇತವಾಗಿರುವ ಸಿಂಧೂರದ ಬಗ್ಗೆ ಡಾ. ಬಸವರಾಜ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ. ಇದಲ್ಲದೇ, "ಆಪರೇಷನ್ ಸಿಂದೂರ್" ಎಂಬ ಸೇನಾ ಕಾರ್ಯಾಚರಣೆಯ ಹೆಸರಿನ ಹಿಂದಿನ ಸಂಬಂಧವನ್ನೂ ಚರ್ಚಿಸಲಾಗಿದೆ.

ಸನಾತನ ಧರ್ಮದಲ್ಲಿ ಸಿಂಧೂರಕ್ಕೆ ವಿಶೇಷ ಮಹತ್ವವಿದೆ. ಹಿಂದೂ ಧರ್ಮದಲ್ಲಿ ಸಿಂಧೂರವನ್ನು ವಿವಾಹಿತ ಮಹಿಳೆಯರ ಸೌಭಾಗ್ಯವೆಂದು ಕರೆಯಲಾಗುತ್ತದೆ. ಏಪ್ರಿಲ್​ 22ರಂದು ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 26  ಭಾರತೀಯರು ಸಾವನ್ನಪ್ಪಿದ್ದರು. ಆ ಕೃತ್ಯಕ್ಕೆ ಪ್ರಾರಂಭಿಕ ಉತ್ತರ ಎಂಬಂತೆ ಆಪರೇಷನ್ ಸಿಂದೂರ್ ಹೆಸರಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಖ್ಯಾತ ಜ್ಯೋತಿಷಿಗಳಾದ ಡಾ ಬಸವರಾಜ ಗುರೂಜಿಯವರು ಸಿಂಧೂರದ ಹಿಂದಿನ ರಹಸ್ಯ ಹಾಗೂ ಇದರ ಮಹತ್ವದ ವಿವರವಾಗಿ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.