Singer Mangli: ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ತೆಲುಗು ಗಾಯಕಿ ಮಂಗ್ಲಿ ‘ವಂದೇ ಮಾತರಂ’ ಘೋಷ

Edited By:

Updated on: Aug 15, 2022 | 9:56 AM

Independence Day 2022: ಕರುನಾಡಿನಲ್ಲಿ ಗಾಯಕಿ ಮಂಗ್ಲಿ ಜನಪ್ರಿಯತೆ ಪಡೆದಿದ್ದಾರೆ. ಬೆಂಗಳೂರಿಗೆ ಬಂದ ಅವರು ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ.

ಖ್ಯಾತ ಗಾಯಕಿ ಮಂಗ್ಲಿ (Singer Mangli) ಅವರು ತೆಲುಗು ಮೂಲದವರು. ಕನ್ನಡದ ಕೆಲವು ಗೀತೆಗಳನ್ನು ಹಾಡುವ ಮೂಲಕವೂ ಅವರು ಫೇಮಸ್​ ಆಗಿದ್ದಾರೆ. ಈಗ ಅವರು ಸ್ವಾತಂತ್ರೋತ್ಸವದ (Independence Day) ಸಲುವಾಗಿ ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ಬಿಜೆಪಿ (BJP) ಕಚೇರಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮಂಗ್ಲಿ ಕೂಡ ಭಾಗಿಯಾಗಿದ್ದಾರೆ. ವೇದಿಕೆ ಮೇಲೆ ವಂದೇ ಮಾತರಂ ಎನ್ನುತ್ತ ಘೋಷಣೆ ಕೂಗುವುದರೊಂದಿಗೆ ಅವರು ಕಾರ್ಯಕ್ರಮ ಆರಂಭಿಸಿದರು. ದೇಶಾದ್ಯಂತ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಡಗರ ಮನೆ ಮಾಡಿದೆ.

 

Loading...
Unable to load recommendations.
Follow Us
TV9 Web

TV9 Kannada

Read More