ಸೌಜನ್ಯ ಕೊಲೆ ಪ್ರಕರಣದ ತನಿಖೆಗೆ SIT ಅಧಿಕೃತ ಚಾಲನೆ: ಮೊದಲ ಸಭೆಯ ಇನ್ ಸೈಡ್ ಮಾಹಿತಿ ಇಲ್ಲಿದೆ
ಮುಖ್ಯಾಂಶಗಳು
- ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ
- ಮಂಗಳೂರು ಎಸ್ಐಟಿ ಕಚೇರಿಯಲ್ಲಿ ಮೊದಲ ಸಭೆ
- ಸಭೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಕ್ತ ನಿರ್ದೇಶನ
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ದಳ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ. ಎಸ್‌ಐಟಿ ಮುಖ್ಯಸ್ಥ ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಮೊದಲ ಸಭೆ ನಡೆಯಿತು. ಮರು ತನಿಖೆಯ ಸ್ವರೂಪ, ಸಾಕ್ಷಿಗಳ ಪರಿಶೀಲನೆ, ಮತ್ತು ತಂಡದ ಜವಾಬ್ದಾರಿಗಳ ಕುರಿತು ಗಂಭೀರ ಚರ್ಚೆ ನಡೆಸಲಾಯಿತು.
ಮಂಗಳೂರು, ಅಕ್ಟೋಬರ್ 01: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗಾಗಿ ವಿಶೇಷ ತನಿಖಾ ದಳ ರಚಿಸಲಾಗಿದೆ. ಇಂದು ಮಂಗಳೂರಲ್ಲಿ ಎಸ್ಐಟಿ ಕಚೇರಿ ಓಪನ್ ಮಾಡಲಾಗಿದೆ. ಇನ್ನು ಎಸ್ಐಟಿ ಮುಖ್ಯಸ್ಥ ಡಿಐಜಿಪಿ ಎನ್.ಶಶಿಕುಮಾರ್ ನೇತೃತ್ವದಲ್ಲಿ ಮೊದಲ ಸಭೆ ಕೂಡ ನಡೆಯಿತು. ಈ ಸಭೆಯಲ್ಲಿ ಐಪಿಎಸ್ ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ, ನಿಶಾ ಜೇಮ್ಸ್, ಲೋಕೇಶ್ ಜಗಲಸಾರ್ ಸೇರಿದಂತೆ ಒಟ್ಟು 16 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಮರು ತನಿಖೆಯನ್ನು ಹೇಗೆ ನಡೆಸಬೇಕು, ಹಿಂದಿನ ಸಿಐಡಿ ಮತ್ತು ಸಿಬಿಐ ತನಿಖಾ ವರದಿಗಳನ್ನು ವಿಶ್ಲೇಷಿಸುವುದು ಹೇಗೆ, ಸಾಕ್ಷಿಗಳ ವಿಚಾರಣೆ ಕುರಿತು ಸುದೀರ್ಘ ಚರ್ಚೆ ನಡೆಯಿತು. ತಂಡದ ಸದಸ್ಯರ ಹಿಂದಿನ ಕಾರ್ಯಾನುಭವಗಳನ್ನು ಆಧರಿಸಿ ಜವಾಬ್ದಾರಿಗಳನ್ನು ವಹಿಸುವ ಬಗ್ಗೆಯೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
