ಸೌಜನ್ಯ ಪ್ರಕರಣದಲ್ಲಿ ಎಸ್ಐಟಿ ಕೈ ಹಾಕಿಯೇ ಇಲ್ಲ : ವಿಚಾರಣೆ ವೇಳೆ ಉದಯ್ ಜೈನ್ ಹೇಳಿದ್ದೇನು?
ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ನೂರಾರು ಶವ ಹೂತಿರುವುದಾಗಿ ಆರೋಪಿಸಿರುವ ಮಾಸ್ಕ್ ಮ್ಯಾನ್ ಚಿನ್ನಯಯ್ಯನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇದರ ನಡುವೆ ಸೌಜನ್ಯ ಪ್ರಕರಣದಲ್ಲಿ ಆರೋಪ ಮುಕ್ತರಾಗಿರುವ ಉದಯ್ ಜೈನ್ ಅವರನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಆದ್ರೆ, ಸೌಜನ್ಯ ಪ್ರಕರಣದಲ್ಲಿ ಕೈ ಹಾಕಿಯೇ ಇಲ್ಲ ಎನ್ನು ಸ್ಫೋಟಕ ಅಂಶ ಟಿವಿ9ಗೆ ಲಭ್ಯವಾಗಿದೆ. ಹೀಗಾಗಿ ಉದಯ್ ಜೈನ್ ಅವರನ್ನ ಎಸ್ ಐ ಟಿ ವಿಚಾರಣೆ ನಡೆಸಿದ್ದು ಸೌಜನ್ಯ ಪ್ರಕರಣದ ವಿಚಾರವಾಗಿ ಅಲ್ಲವೇ ಅಲ್ಲ. ಬದಲಿಗೆ ಚಿನ್ನಯ್ಯ ಹೇಳಿಕೆ ಆದಾರದಲ್ಲಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು, (ಸೆಪ್ಟೆಂಬರ್ 04): ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ನೂರಾರು ಶವ ಹೂತಿರುವುದಾಗಿ ಆರೋಪಿಸಿರುವ ಮಾಸ್ಕ್ ಮ್ಯಾನ್ ಚಿನ್ನಯಯ್ಯನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇದರ ನಡುವೆ ಸೌಜನ್ಯ ಪ್ರಕರಣದಲ್ಲಿ ಆರೋಪ ಮುಕ್ತರಾಗಿರುವ ಉದಯ್ ಜೈನ್ ಅವರನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಆದ್ರೆ, ಸೌಜನ್ಯ ಪ್ರಕರಣದಲ್ಲಿ ಕೈ ಹಾಕಿಯೇ ಇಲ್ಲ ಎನ್ನು ಸ್ಫೋಟಕ ಅಂಶ ಟಿವಿ9ಗೆ ಲಭ್ಯವಾಗಿದೆ. ಹೀಗಾಗಿ ಉದಯ್ ಜೈನ್ ಅವರನ್ನ ಎಸ್ ಐ ಟಿ ವಿಚಾರಣೆ ನಡೆಸಿದ್ದು ಸೌಜನ್ಯ ಪ್ರಕರಣದ ವಿಚಾರವಾಗಿ ಅಲ್ಲವೇ ಅಲ್ಲ. ಬದಲಿಗೆ ಚಿನ್ನಯ್ಯ ಹೇಳಿಕೆ ಆದಾರದಲ್ಲಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಎಸ್ಐಟಿ ವಿಚಾರಣೆ ವೇಳೆ ಉದಯ್ ಜೈನ್ ಏನೆಲ್ಲಾ ಹೇಳಿದ್ದಾರೆ ಎನ್ನುವ ಮಾಹಿತಿ ಟಿವಿ9ಗೆ ಲಭ್ಯವಾಗಿದೆ. ಮೃತ ದೇಹಗಳನ್ನು ಹೂತು ಹಾಕಲು ಸೂಚನೆ ನೀಡುವುದು. ಮತ್ತು ಕೊಲೆಯಾದ ಮಹಿಳೆಯರ ಬಗ್ಗೆ ಇವರಿಗೆಲ್ಲಾ ಮಾಹಿತಿ ಇದೆ ಎಂದು ಚಿನ್ನಯ್ಯ ಹೇಳಿಕೆ ನೀಡಿದ್ದ. ಚಿನ್ನಯ್ಯನ ನ್ಯಾಯಾಧೀಶರ ಮುಂದೆ ನೀಡಿದ್ದ ಹೇಳಿಕೆಯ ಸತ್ಯಸತ್ಯತೆ ಬಗ್ಗೆ ಉದಯ್ ಜೈನ್ ಅವರನ್ನ ವಿಚಾರಣೆ ನಡೆಸಲಾಗಿದೆ.
ಈ ಬಗ್ಗೆ ಟಿವಿ9 ಜತೆ ಮಾತನಾಡಿರುವ ಉದಯ್ ಕುಮಾರ್ ಜೈನ್, ನಿನ್ನೆ ಸಂಜೆ 5 ಗಂಟೆವರೆಗೆ ವಿಚಾರಣೆ ಮಾಡಿದ್ರು. ಸೌಜನ್ಯ ವಿಚಾರವಾಗಿ ಯಾವುದೇ ಪ್ರಶ್ನೆ ಕೇಳಲಿಲ್ಲ. ಚಿನ್ನಯ್ಯನ ಬಗ್ಗೆ SIT ಏನು ಕೇಳಲಿಲ್ಲ. ವಿದ್ಯಾಬ್ಯಾಸ, ಉದ್ಯೋಗ, ಕುಟುಂಬದ ಎಲ್ಲಾ ವಿಚಾರದ ಬಗ್ಗೆ ಪಿನ್ ಟು ಪಿನ್ ಡೀಟೇಲ್ಸ್ ಹಾಗೂ ಧರ್ಮಸ್ಥಳ ಸುತ್ತಾಮುತ್ತ ಹೆಣಗಳ ಹೂತಿರೋ ಬಗ್ಗೆ ಮಾಹಿತಿ ಕೇಳಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
