ಬೆಂಗಳೂರಿನ ರಾಜಾಜಿನಗರದಲ್ಲಿ ಬೃಹತ್ ಮರ ಉರುಳಿ ಐದಾರು ವಾಹನಗಳು ಜಖಂ, ಅದೃಷ್ಟವಶಾತ್ ಪ್ರಾಣಾಪಾಯವಿಲ್ಲ

ಅರುಣ್​ ಕುಮಾರ್​ ಬೆಳ್ಳಿ

Updated on: Apr 03, 2025 | 8:19 PM

ನಗರದಲ್ಲಿರುವ ಮರಗಿಡಗಳ ಸಮೀಕ್ಷೆ ನಡೆಸುವುದು ಅತ್ಯಂತ ಅವಶ್ಯಕವೆನಿಸುತ್ತದೆ. ಪ್ರತಿ ಮಳೆಗಾಲದಲ್ಲಿ ಮರಗಳು ಉರುಳುವುದು ಅತ್ಯಂತ ಸಾಮಾನ್ಯ ಸಂಗತಿಯಾಗಿದೆ. ಸರ್ವೇ ಮಾಡಿಸುವಾಗ ಉರುಳಬಹುದಾದ ಮರಗಳು ಗಮನಕ್ಕೆ ಬಂದೇ ಬರುತ್ತವೆ, ಅಂಥ ಮರಗಳನ್ನು ಕಡಿಸಿಬಿಟ್ಟರೆ ಅವು ಉರುಳಿ ವಾಹನಗಳು ಜಖಂಗೊಳ್ಳೋದು, ಪ್ರಾಣಾಪಾಯ, ಗಂಭೀರ ಸ್ವರೂಪದ ಗಾಯ ಮೊದಲಾದವುಗಳನ್ನು ತಪ್ಪಿಸಿದಂತಾಗುತ್ತದೆ.

ಬೆಂಗಳೂರು, ಏಪ್ರಿಲ್ 3: ಬೆಂಗಳೂರಲ್ಲಿ ಮಳೆಯಾದರೆ ಸೃಷ್ಟಿಯಾಗುವ ಅವಾಂತರಗಳು ಒಂದೆರಡಲ್ಲ. ಇಲ್ನೋಡಿ ರಾಜಾಜಿನಗರದಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ದೃಶ್ಯಗಳಲ್ಲಿ ಕಾಣುತ್ತಿರುವ ಕಾರು, ಮತ್ತೆರಡು ಕಾರು, ಎರಡು ಟೂ ವ್ಹೀಲರ್​ಗಳಿ ಮತ್ತೊಂದು ಗೂಡ್ಸ್​ ಕ್ಯಾರಿಯರ್ ಆಟೋ ಜಖಂಗೊಂಡಿವೆ. ಸಮಾಧಾನಕರ ಸಂಗತಿಯೆಂದರೆ ಯಾವುದೇ ಪ್ರಾಣಾಪಾಯ ಸಂಭವಿಸದಿರೋದು. ಉರುಳಿರುವ ಮರ ಬಹಳ ಹಳೆಯ ಕಾಲದ್ದು ಅದನ್ನು ತೆಗೆಸಿಬಿಡಿ ಅಂತ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದರೂ ಅವರಿಂದ ಕ್ರಮ ಜರುಗಿಲ್ಲ.

ಇದನ್ನೂ ಓದಿ:  ಬಿರುಗಾಳಿ ಮಳೆಗೆ ಉರುಳಿಬಿದ್ದ 150 ವರ್ಷದ ಹಳೆಯ ಅಶ್ವತ್ಥ ಮರ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.