Video: ಅಯ್ಯೋ ದೇವ್ರೆ, ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್, ಆಮೇಲೇನಾಯ್ತು ನೋಡಿ

Updated on: Dec 12, 2025 | 10:51 AM

ಅಪಾಯಕಾರಿ ಸಾಹಸಗಳಿಗೆ ಕೈ ಹಾಕುವ ಮುನ್ನ ಸಾವಿರ ಬಾರಿ ಆಲೋಚಿಸಬೇಕು. ಸ್ಕೈ ಡೈವಿಂಗ್ ಎಂಬುದು ಕೂಡ ಅಂಥದ್ದೇ ಒಂದು ಸಾಹಸ. ಹಲವು ಮಂದಿ ವಿಮಾನದಿಂದ ಕೆಳಗೆ ಡೈವ್ ಮಾಡಲು ಮುಂದಾಗಿದ್ದರು. ಗಾಳಿಯ ಒತ್ತಡವಿದ್ದ ಪರಿಣಾಮ ಹಾರಲಿಲ್ಲ ಬದಲಾಗಿ ಕೆಳಗೆ ಬಿದ್ದಿದ್ದಾರೆ. ಈ ಸಮಯದಲ್ಲಿ ಹೇಗೋ ಪ್ಯಾರಾಚೂಟ್ ಓಪನ್ ಆಗಿ ವಿಮಾನದ ರೆಕ್ಕೆಯಲ್ಲಿ ಸಿಲುಕಿತ್ತು, ಅದನ್ನು ಹಿಡಿದು ಡೈವರ್ ನೇತಾಡುತ್ತಿದ್ದರು. ಬಳಿಕ ಅದು ತುಂಡಾಗಿದೆ ಇನ್ನೇನು ಕೆಳಗೆ ಬಿದ್ದೇ ಬಿಡುತ್ತಾರೆ ಎನ್ನುವಷ್ಟರಲ್ಲಿ ಬ್ಯಾಕಪ್ ಪ್ಯಾರಾಚೂಟರ್ ತೆರೆದುಕೊಂಡಿತ್ತು, ವ್ಯಕ್ತಿ ಯಾವುದೇ ಅಪಾಯವಿಲ್ಲದೆ ಕೆಳಗೆ ಇಳಿದಿದ್ದಾರೆ.

ಆಸ್ಟ್ರೇಲಿಯಾ, ಡಿಸೆಂಬರ್ 12: ಅಪಾಯಕಾರಿ ಸಾಹಸಗಳಿಗೆ ಕೈ ಹಾಕುವ ಮುನ್ನ ಸಾವಿರ ಬಾರಿ ಆಲೋಚಿಸಬೇಕು. ಸ್ಕೈ ಡೈವಿಂಗ್ ಎಂಬುದು ಕೂಡ ಅಂಥದ್ದೇ ಒಂದು ಸಾಹಸ. ಹಲವು ಮಂದಿ ವಿಮಾನದಿಂದ ಕೆಳಗೆ ಡೈವ್ ಮಾಡಲು ಮುಂದಾಗಿದ್ದರು. ಗಾಳಿಯ ಒತ್ತಡವಿದ್ದ ಪರಿಣಾಮ ಹಾರಲಿಲ್ಲ ಬದಲಾಗಿ ಕೆಳಗೆ ಬಿದ್ದಿದ್ದಾರೆ. ಈ ಸಮಯದಲ್ಲಿ ಹೇಗೋ ಪ್ಯಾರಾಚೂಟ್ ಓಪನ್ ಆಗಿ ವಿಮಾನದ ರೆಕ್ಕೆಯಲ್ಲಿ ಸಿಲುಕಿತ್ತು, ಅದನ್ನು ಹಿಡಿದು ಡೈವರ್ ನೇತಾಡುತ್ತಿದ್ದರು. ಬಳಿಕ ಅದು ತುಂಡಾಗಿದೆ ಇನ್ನೇನು ಕೆಳಗೆ ಬಿದ್ದೇ ಬಿಡುತ್ತಾರೆ ಎನ್ನುವಷ್ಟರಲ್ಲಿ ಬ್ಯಾಕಪ್ ಪ್ಯಾರಾಚೂಟರ್ ತೆರೆದುಕೊಂಡಿತ್ತು, ವ್ಯಕ್ತಿ ಯಾವುದೇ ಅಪಾಯವಿಲ್ಲದೆ ಕೆಳಗೆ ಇಳಿದಿದ್ದಾರೆ. ಈ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಸೆಪ್ಟೆಂಬರ್‌ನಲ್ಲಿ ಕೈರ್ನ್ಸ್‌ನ ದಕ್ಷಿಣದಲ್ಲಿ ನಡೆದ ಸಾಹಸ ಪ್ರದರ್ಶನದ ಸಮಯದಲ್ಲಿ ಸಂಭವಿಸಿದ ಘಟನೆ ಇದಾಗಿದೆ. 15 ಸಾವಿರ ಅಡಿ ಎತ್ತರದಿಂದ ಅವರು ಕೆಳಗೆ ಹಾರಿದ್ದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ