Prajadhvani Yatre in Vijayapura: ಸಿದ್ದರಾಮಯ್ಯನವರ ಕಾರ್ಯಕ್ರಮದಲ್ಲಿ ‘ಘರ್ ಘರ್ ಮೋದಿ’ ಘೋಷಣೆಗಳು!

Prajadhvani Yatre in Vijayapura: ಸಿದ್ದರಾಮಯ್ಯನವರ ಕಾರ್ಯಕ್ರಮದಲ್ಲಿ ‘ಘರ್ ಘರ್ ಮೋದಿ’ ಘೋಷಣೆಗಳು!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 23, 2023 | 7:16 PM

ಬಿಜೆಪಿಯ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಹತ್ತಿರ ಬಂದು ಹರ್ ಹರ್ ಮೋದಿ ಘರ್ ಘರ್ ಮೋದಿ, ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು.

ವಿಜಯಪುರ: ಚುನಾವಣೆ ಹತ್ತಿರದಲ್ಲಿರುವಾಗ ಇಂಥ ದೃಶ್ಯಗಳು ಸಾಮಾನ್ಯ ಮಾರಾಯ್ರೇ. ಒಂದು ಪಕ್ಷದ ನಾಯಕರು ರ‍್ಯಾಲಿ (Rally) ನಡೆಸುವಾಗ, ಸಾರ್ವಜನಿಕ ಸಭೆಗಳನ್ನು ಆಯೋಜಿಸಿದಾಗ ಬೇರೆ ಪಕ್ಷಗಳ ಕಾರ್ಯಕರ್ತರು ತಮ್ಮ ನಾಯಕರ ಘೋಷಣೆಗಳನ್ನು ಕೂಗುವುದು ಆದಿಯಿಂದ ನಡೆದುಕೊಂಡು ಬಂದಿರುವ ಪದ್ಧತಿ. ನಿನ್ನೆ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದಾರಾಮಯ್ಯನವರು (Siddaramaiah) ಪ್ರಜಾಧ್ವನಿ ಯಾತ್ರೆಯ (Prajadhvani Yatre) ಭಾಗವಾಗಿ ಜಿಲ್ಲೆಯ ಬಸವನಬಾಗೇವಾಡಿಗೆ ಬಂದಾಗ ಬಿಜೆಪಿಯ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಹತ್ತಿರ ಬಂದು ಹರ್ ಹರ್ ಮೋದಿ ಘರ್ ಘರ್ ಮೋದಿ, ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು. ಈ ವಿಡಿಯೋ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ