Video: ಲೈಟ್ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿಯನ್ನು ಮೊಟಕುಗೊಳಿಸಿದ ಮಾಯಾವತಿ
ಲೈಟ್ನಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅರ್ಧಕ್ಕೆ ಪತ್ರಿಕಾಗೋಷ್ಠಿ ಮೊಟಕುಗೊಳಿಸಿ ತೆರಳಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಅವರು ಪಕ್ಷ ಮತ್ತು ಮೈತ್ರಿಕೂಟದ ಸಾಧನೆಗಳ ಬಗ್ಗೆ ಮಾತನಾಡುತ್ತಿದ್ದರು. ದೇಶದಲ್ಲಿ ಬಿಎಸ್ಪಿ ಚಳವಳಿಯನ್ನು ತಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ವಿವಿಧ ತಂತ್ರಗಳನ್ನು ಬಳಸುತ್ತಿವೆ ಎಂದು ಮಾಯಾವತಿ ಹೇಳಿದರು. ನಮ್ಮ ಪಕ್ಷವು ಯಾವಾಗಲೂ ಬ್ರಾಹ್ಮಣರಿಗೆ ಸರಿಯಾದ ಗೌರವವನ್ನು ನೀಡಿದೆ. ಬ್ರಾಹ್ಮಣರಿಗೆ ಯಾರ ದಾನವೂ ಅಗತ್ಯವಿಲ್ಲ.
ಲಕ್ನೋ, ಜನವರಿ 15: ಲೈಟ್ನಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅರ್ಧಕ್ಕೆ ಪತ್ರಿಕಾಗೋಷ್ಠಿ ಮೊಟಕುಗೊಳಿಸಿ ತೆರಳಿರುವ ಘಟನೆ ಲಕ್ನೋದಲ್ಲಿ ನಡೆದಿದೆ. ಅವರು ಪಕ್ಷ ಮತ್ತು ಮೈತ್ರಿಕೂಟದ ಸಾಧನೆಗಳ ಬಗ್ಗೆ ಮಾತನಾಡುತ್ತಿದ್ದರು. ದೇಶದಲ್ಲಿ ಬಿಎಸ್ಪಿ ಚಳವಳಿಯನ್ನು ತಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ವಿವಿಧ ತಂತ್ರಗಳನ್ನು ಬಳಸುತ್ತಿವೆ ಎಂದು ಮಾಯಾವತಿ ಹೇಳಿದರು. ನಮ್ಮ ಪಕ್ಷವು ಯಾವಾಗಲೂ ಬ್ರಾಹ್ಮಣರಿಗೆ ಸರಿಯಾದ ಗೌರವವನ್ನು ನೀಡಿದೆ. ಬ್ರಾಹ್ಮಣರಿಗೆ ಯಾರ ದಾನವೂ ಅಗತ್ಯವಿಲ್ಲ.
ಅವರನ್ನು ಬಿಜೆಪಿ, ಎಸ್‌ಪಿ ಅಥವಾ ಕಾಂಗ್ರೆಸ್ ದಾರಿ ತಪ್ಪಿಸಬಾರದು. ಬಿಎಸ್‌ಪಿ ಸರ್ಕಾರ ರಚನೆಯಾದಾಗ, ಬ್ರಾಹ್ಮಣರಿಗೆ ಸಂಪೂರ್ಣ ಗೌರವ ಸಿಗುತ್ತದೆ, ಕ್ಷತ್ರಿಯ ಸಮುದಾಯವನ್ನು ಸಹ ನೋಡಿಕೊಳ್ಳಲಾಗುತ್ತದೆ ಮತ್ತು ಜಾಟ್ ಸಮುದಾಯವನ್ನು ಸಹ ನೋಡಿಕೊಳ್ಳಲಾಗುತ್ತದೆ. ದಲಿತರು ಮತ್ತು ಅಲ್ಪಸಂಖ್ಯಾತರನ್ನು ಕೂಡ ಸಮಾನವಾಗಿ ನೋಡಲಾಗುತ್ತದೆ ಎಂದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

