RCBW vs DCW: ಕಣ್ಣೀರು ಕಟ್ಟಿಟ್ಟ ಸ್ಮೃತಿ ಮಂಧಾನ: ಸೋತ ನೋವಲ್ಲಿ ಆರ್​ಸಿಬಿ ನಾಯಕಿ ಏನು ಮಾಡಿದ್ರು ನೋಡಿ

|

Updated on: Mar 11, 2024 | 9:31 AM

Smriti Mandhana Crying: ಗುರಿ ಬೆನ್ನಟ್ಟಲು ಆರ್‌ಸಿಬಿ ವಿಫಲವಾದ ಬಳಿಕ ಕ್ಯಾಮೆರಾಮನ್ ಆರ್‌ಸಿಬಿಯ ಡಗೌಟ್‌ನತ್ತ ತೋರಿಸಿದ್ದು, ತಂಡದ ನಾಯಕಿ ಸ್ಮೃತಿ ಮಂಧಾನ ನಿರಾಸೆಯಲ್ಲಿರುವುದು ಕಂಡುಬಂತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಭಾನುವಾರ (ಮಾರ್ಚ್ 10) ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL 2024) 2024 ರ ತಮ್ಮ ಹದಿನೇಳನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಒಂದು ರನ್‌ನಿಂದ ಸೋತಿತು. ಗೆಲ್ಲುವ ಪಂದ್ಯವನ್ನು ಕಳೆದುಕೊಂಡಾಗ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ನಿರಾಶೆಗೊಂಡರು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ಗೆಲುವಿಗೆ 182 ರನ್‌ಗಳ ಅಗತ್ಯವಿತ್ತು. ಕೊನೆಯ ಒಂದು ಎಸೆತದಲ್ಲಿ 2 ರನ್‌ಗಳು ಬೇಕಾಯಿತು. ಆದರೆ ಆರ್​ಸಿಬಿ ಬ್ಯಾಟರ್ ರಿಚಾ ಘೋಷ್ ವಿನ್ನಿಂಗ್ ಶಾಟ್ ಹಿಡೆಯಲು ವಿಫಲರಾದರು. ಈ ಸೋಲಿನ ಮೂಲಕ ಡಬ್ಲ್ಯೂಪಿಎಲ್ 2024 ರಲ್ಲಿ ಆರ್​ಸಿಬಿ ಪ್ಲೇಆಫ್‌ಗೆ ಪ್ರವೇಶಿಸುವ ಸಾಧ್ಯತೆಗಳು ಕಡಿಮೆ ಆಗಿದೆ. ಗುರಿ ಬೆನ್ನಟ್ಟಲು ಆರ್‌ಸಿಬಿ ವಿಫಲವಾದ ಬಳಿಕ ಕ್ಯಾಮೆರಾಮನ್ ಆರ್‌ಸಿಬಿಯ ಡಗೌಟ್‌ನತ್ತ ತೋರಿಸಿದ್ದು, ತಂಡದ ನಾಯಕಿ ಸ್ಮೃತಿ ನಿರಾಸೆಯಲ್ಲಿರುವುದು ಕಂಡುಬಂತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ