ಲವ್ ಸ್ಟೋರಿ ರಿವೀಲ್ ಮಾಡಿದ ದೀಪಿಕಾ ದಾಸ್; ಇಲ್ಲಿದೆ ವಿಡಿಯೋ
ದೀಪಿಕಾ ದಾಸ್ ಏಕಾಏಕಿ ಮದುವೆ ಆಗಿದ್ದು ಏಕೆ ಎಂದು ಎಲ್ಲರೂ ಪ್ರಶ್ನಿಸಿದ್ದರು. ಇದಕ್ಕೆ ದೀಪಿಕಾ ದಾಸ್ ಅವರು ಆರತಕ್ಷತೆ ಕಾರ್ಯಕ್ರಮದಲ್ಲಿ ಉತ್ತರಿಸಿದ್ದಾರೆ. ಮದುವೆ ಆಗಬೇಕು ಎಂದು ನಿರ್ಧರಿಸಿ ನಾಲ್ಕೈದು ತಿಂಗಳೇ ಆಗಿತ್ತು. ಇದಕ್ಕೆ ಸೈಲೆಂಟ್ ಆಗಿ ಸಿದ್ಧತೆ ನಡೆದಿತ್ತು ಎಂದಿದ್ದಾರೆ ದೀಪಿಕಾ ದಾಸ್.
ದೀಪಿಕಾ ದಾಸ್ (Deepika Das) ಹಾಗೂ ದೀಪಕ್ ಇತ್ತೀಚೆಗೆ ಮದುವೆ ಆಗಿದ್ದಾರೆ. ಏಕಾಏಕಿ ಮದುವೆ ಆಗಿದ್ದು ಏಕೆ ಎಂದು ಎಲ್ಲರೂ ಪ್ರಶ್ನಿಸಿದ್ದರು. ಇದಕ್ಕೆ ದೀಪಿಕಾ ದಾಸ್ ಅವರು ಆರತಕ್ಷತೆ ಕಾರ್ಯಕ್ರಮದಲ್ಲಿ ಉತ್ತರಿಸಿದ್ದಾರೆ. ಮದುವೆ ಆಗಬೇಕು ಎಂದು ನಿರ್ಧರಿಸಿ ನಾಲ್ಕೈದು ತಿಂಗಳೇ ಆಗಿತ್ತು. ಇದಕ್ಕೆ ಸೈಲೆಂಟ್ ಆಗಿ ಸಿದ್ಧತೆ ನಡೆದಿತ್ತು ಎಂದಿದ್ದಾರೆ ದೀಪಿಕಾ ದಾಸ್. ‘ನಮ್ಮದು ನಾಲ್ಕೈದು ವರ್ಷಗಳ ಹಿಂದಿನ ಪರಿಚಯ. ನಮ್ಮಿಬ್ಬರ ಮಧ್ಯೆ ಪ್ರೀತಿ ವಿಚಾರ ಎಂದಿಗೂ ಬಂದಿಲ್ಲ. ವರ್ಷದ ಹಿಂದೆ ಇಬ್ಬರ ಮಧ್ಯೆ ಮದುವೆ ಮಾತುಕತೆ ಬಂತು. ಇಬ್ಬರೂ ಪರಸ್ಪರ ಒಂದು ವರ್ಷ ಡೇಟ್ ಮಾಡಿದೆವು. ಇಬ್ಬರಿಗೂ ಓಕೆ ಎನಿಸಿತು. ಮದುವೆ ಆದೆವು’ ಎಂದು ಹೇಳಿದ್ದಾರೆ ದೀಪಿಕಾ ದಾಸ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos