ಚಿಕ್ಕಬಳ್ಳಾಪುರದ ಎಸ್ಬಿಐ ಎಟಿಎಂ ಒಳಗೆ ಹಾವು ಪತ್ತೆ
ಚಿಕ್ಕಬಳ್ಳಾಪುರ ನಗರದ ಎಟಿಎಂ ಒಂದರಲ್ಲಿ ಹಾವನ್ನು ಕಂಡು ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ (Chikkaballapur) ನಗರ ತಾಲೂಕು ಪಂಚಾಯಿತಿ ಬಳಿ ಇರುವ ಎಸ್.ಬಿ.ಐ (SBI) ಎ.ಟಿ.ಎಂಗೆ (ATM) ಕೆರೆಹಾವೊಂದು ನುಗ್ಗಿದ್ದು, ಹಾವನ್ನು ಕಂಡು ಎ.ಟಿ.ಎಂ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ಕೆರೆ ಹಾವೊಂದು ಎಸ್.ಬಿ.ಐ ಎ.ಟಿ.ಎಂ ಮಷಿನ್ ಹಿಂದೆ ಸೇರಿಕೊಂಡಿತ್ತು. ಈ ವೇಳೆ ಗ್ರಾಹಕರೊಬ್ಬರು ಹಾವನ್ನು ಕಂಡು ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾರೆ. ನಂತರ ಎಟಿಎಂ ಸಿಬ್ಬಂದಿ ಮತ್ತು ಹಾವುಗಳ ಸಂರಕ್ಷಕ ಪೃಥ್ವಿರಾಜ್ ಅವರಿಗೆ ಕರೆ ಮಾಡಿದ್ದಾರೆ. ಕೂಡಲೆ ಸ್ಥಳಕ್ಕೆ ಬಂದ ಪೃಥ್ವಿರಾಜ್ ಎ.ಟಿ.ಎಂ. ಸೇರಿಕೊಂಡಿದ್ದ ಕೆರೆಹಾವನ್ನು ರಕ್ಷಿಸಿದ್ದಾರೆ.