Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ನಿಲ್ಲಿಸಿದ್ದ ಬೈಕ್​ ಸೀಟ್ ಅಡಿ ಬೃಹತ್ ಗಾತ್ರದ ಹಾವು ಪತ್ತೆ! ವಿಡಿಯೋ ಇಲ್ಲಿದೆ

ಗದಗ: ನಿಲ್ಲಿಸಿದ್ದ ಬೈಕ್​ ಸೀಟ್ ಅಡಿ ಬೃಹತ್ ಗಾತ್ರದ ಹಾವು ಪತ್ತೆ! ವಿಡಿಯೋ ಇಲ್ಲಿದೆ

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Rakesh Nayak Manchi

Updated on: Aug 06, 2023 | 8:44 PM

ಮಳೆಗಾಲದಲ್ಲಿ ಜಲಚರ ಸೇರಿದಂತೆ ಇನ್ನಿತರ ಜೀವಿಗಳು ಮನೆಯೊಳಗೆ ಬಂದು ಸೇರಿಕೊಳ್ಳುತ್ತಿವೆ. ಇತ್ತೀಚೆಗೆ ನೆಲಮಂಗಲದಲ್ಲಿರುವ ಮನೆಯೊಂದರ ಶೌಚಾಲಯದಲ್ಲಿ ನಾಗರಹಾವು ಕಂಡುಬಂದಿತ್ತು. ಇದೀಗ ಗದಗದಲ್ಲಿ ನಿಲ್ಲಿಸಿದ್ದ ಬೈಕ್​ನಲ್ಲಿ ಕೇರೆ ಹಾವು ಪತ್ತೆಯಾಗಿದೆ.

ಗದಗ, ಆಗಸ್ಟ್ 6: ಜಿಲ್ಲೆಯ ನರಗುಂದ ಪಟ್ಟಣದ ಆಶ್ರಯ ಕಾಲೋನಿಯಲ್ಲಿರುವ ಮನೆಯೊಂದರ ಆವರಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಸೀಟ್ ಅಡಿಯಲ್ಲಿ ಬೃಹತ್ ಗಾತ್ರದ ಹಾವು ಪ್ರತ್ಯಕ್ಷವಾಗಿದೆ. ನವಾಬ್ ಪಠಾಣ್ ಎನ್ನುವವರ ಮನೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಸೀಟ್​ ಒಳಗೆ ಹೋದ ಹಾವು ಅವಿತುಕೊಂಡಿತ್ತು. ಮಕ್ಕಳು ವಾಹನದಲ್ಲಿ ಆಡುತ್ತಿದ್ದಾಗ ಹಾವು ನೋಡಿ ಭೀತಿಗೊಂಡಿದ್ದಾರೆ. ಮಕ್ಕಳು ಪೋಷಕರಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ಪ್ರೇಮಿ ಸುರೇಬಾನ, ಪರಿಶೀಲಿಸಿದಾಗ ಕೇರೆ ಹಾವು (Rat Snake) ಎಂದು ತಿಳಿಸಿದ್ದಾರೆ. ನಂತರ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ