AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಹಾವುಗಳ ಕಾಟ: ಮನೆಯಿಂದ ಹೊರ ಬರುವುದಕ್ಕೂ ಮುನ್ನ ಹೆಲ್ಮೆಟ್, ಕಾರು ಚೆಕ್ ಮಾಡಿದ್ರೆ ಒಳಿತು

ಮಳೆಗಾಲ ಆರಂಭವಾಗುತ್ತಿದ್ದಂತೆ ಮಹಾನಗರದಲ್ಲಿ ಹಾವುಗಳು ಸಂಖ್ಯೆ ವಿಪರೀತ ಹೆಚ್ಚಾಗಿದೆ. ಅದರಂತೆ ನಿನ್ನೆ(ಜು.20) ವಿಧಾನಸೌಧಕ್ಕೂ ಹಾವು ಎಂಟ್ರಿಕೊಟ್ಟಿತ್ತು. ಹೌದು ನೀವು ಮನೆಯಿಂದ ಹೊರಗೆ ಹೋಗುವುದಕ್ಕೂ ಮುಂಚೆ ಹೆಲ್ಮೆಟ್, ಕಾರು​ಗಳನ್ನ ಒಮ್ಮೆ ಚೆಕ್ ಮಾಡಿದ್ರೆ ಒಳಿತು.

Poornima Agali Nagaraj
Poornima Agali Nagaraj| Edited By: ಕಿರಣ್ ಹನುಮಂತ್​ ಮಾದಾರ್|

Updated on: Jul 21, 2023 | 8:25 AM

Share

ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಮಹಾನಗರದಲ್ಲಿ ಹಾವುಗಳು ಸಂಖ್ಯೆ ವಿಪರೀತ ಹೆಚ್ಚಾಗಿದೆ. ಅದರಂತೆ ನಿನ್ನೆ(ಜು.20) ವಿಧಾನಸೌಧಕ್ಕೂ ಹಾವು ಎಂಟ್ರಿಕೊಟ್ಟಿತ್ತು. ಹೌದು ನೀವು ಮನೆಯಿಂದ ಹೊರಗೆ ಹೋಗುವುದಕ್ಕೂ ಮುಂಚೆ ಹೆಲ್ಮೆಟ್, ಕಾರು​ಗಳನ್ನ ಒಮ್ಮೆ ಚೆಕ್ ಮಾಡಿದ್ರೆ ಒಳಿತು. ಇಲ್ಲವಾದರೆ ನಿಮಗೂ ಹಾವಿನ ದರ್ಶನ ಆಗಬಹುದು. ಇತ್ತೀಚೆಗೆ ಮನೆಯ ಸಂಧಿ ಗೊಂದಿಗಳಲ್ಲಿ ಹಾವು ಕಾಣಿಸಿಕೊಳ್ಳುತ್ತಿವೆ. ಈ ಹಾವುಗಳನ್ನ ಹಿಡಿಯಲು ವನ್ಯ ಸಂರಕ್ಷಣಾ ತಂಡ ಈಗಾಗಲೇ ಬಂದಿದ್ದು, ಪ್ರತಿದಿನ 50 ಕ್ಕು ಹೆಚ್ಚು ಕರೆಗಳು ಬರುತ್ತಿವೆಯಂತೆ.

ಹೆಲ್ಮೆಟ್, ಕಾಂಪೌಂಡ್, ಕಾರು, ಶೂಸ್, ವಾಟಾರ್ ಟ್ಯಾಂಕರ್, ಫುಟ್​ಪಾತ್​ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹಾವುಗಳು

ಹೌದು ನಗರದ ಯಲಹಂಕ, ಆರ್ ಆರ್ ನಗರ, ಆರ್ ಟಿ ನಗರ, ಮಹದೇವಪುರ ಭಾಗದಲ್ಲಿ ಪ್ರತಿನಿತ್ಯ ಹಾವಿನ ದರ್ಶನವಾಗುತ್ತಿದೆ. ಇದರಿಂದ ಜನರು‌ ರೋಸಿಹೋಗಿದ್ದಾರೆ. ಮಳೆಗಾಲದಲ್ಲಿ ಹಾವುಗಳ ಮರಿ ಮಾಡುತ್ತವೆ. ಈ ಕಾರಣದಿಂದಾಗಿ ಬೆಚ್ಚನೆಯ ಜಾಗವನ್ನ ಹುಡುಕುತ್ತಿರುತ್ತದೆ. ಇದರಿಂದಾಗಿ ಜನರಿರುವ ಕಡೆ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ ಎಂದು ಉರಗ ಪ್ರೇಮಿಗಳು ಹೇಳುತ್ತಿದ್ದಾರೆ.

ಇದನ್ನೂ ಓದಿ:Snakelets birth: ನಡುರಸ್ತೆಯಲ್ಲಿ ಸರಸರನೇ ಸಾಲಾಗಿ ಮರಿಗಳಿಗೆ ಜನ್ಮ ನೀಡಿದ ಹಾವು, ಕುತೂಹಲಗೊಂಡ ಜನ!

ರಾಜಾಧಾನಿಯಲ್ಲಿಲ್ಲ ಬೇಡಿಕೆಗೆ ತಕ್ಕಷ್ಟು ವನ್ಯ ಸಂರಕ್ಷಕರು

ಇನ್ನು ಹೆಚ್ಚಾಗಿ ಮಹಾನಗರದಲ್ಲಿಯೇ ಹಾವುಗಳು ಕಂಡು ಬರುತ್ತಿದ್ದು, ಸಿಲಿಕಾನ್​ ಸಿಟಿ ಜನರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಮೊದಲೇ ರಾಜಾಧಾನಿಯಲ್ಲಿ ಬೇಡಿಕೆಗೆ ತಕ್ಕಷ್ಟು ವನ್ಯ ಸಂರಕ್ಷಕರು ಇಲ್ಲ. ಸಧ್ಯ ಬೆಂಗಳೂರು ವ್ಯಾಪ್ತಿಯಲ್ಲಿ 7 ಜನರಷ್ಟೇ ಹಾವುಗಳನ್ನ ಹಿಡಿಯುವ ವನ್ಯ ಸಂರಕ್ಷಕರಿದ್ದಾರೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್