SC, ST ಜಮೀನು ವರ್ಗಾವಣೆ ನಿಷೇಧ ಬಿಲ್ ಅಂಗೀಕಾರ

ಎಸ್ಸಿ ಎಸ್ಟಿ ಸಮುದಾಯಗಳ ಜಮೀನು ಸರ್ಕಾರದ ಅನುಮತಿ ಪಡೆಯದೇ ಪರಭಾರೆ ಮಾಡಿದರೆ ಮೂಲ ಮಂಜೂರಾತಿದಾರರಿಗೆ ವಾಪಸ್ ಕೊಡಲು ಅವಕಾಶ ಇರುವ ವಿಧೇಯಕವು ಇಂದು ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿತು.

SC, ST ಜಮೀನು ವರ್ಗಾವಣೆ ನಿಷೇಧ ಬಿಲ್ ಅಂಗೀಕಾರ
SC, ST ಜಮೀನು ವರ್ಗಾವಣೆ ನಿಷೇಧ ಬಿಲ್ ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕಾರ (ಸಾಂದರ್ಭಿಕ ಚಿತ್ರ)Image Credit source: rb.gy/lrrpbk
Follow us
| Updated By: Rakesh Nayak Manchi

Updated on:Jul 20, 2023 | 8:46 PM

ವಿಧಾನಸಭೆ: ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) ತಿದ್ದುಪಡಿ ವಿಧೇಯಕವು ವಿಧಾನಸಭೆಯಲ್ಲಿ ಇಂದು (ಜುಲೈ 20) ಅಂಗೀಕಾರ ಪಡೆದುಕೊಂಡಿತು. ಎಸ್​ಸಿ ಎಸ್​​ಟಿ (SC ST) ಸಮುದಾಯಗಳ ಜಮೀನು ಸರ್ಕಾರದ ಅನುಮತಿ ಪಡೆಯದೇ ಪರಭಾರೆ ಮಾಡಿದರೆ ಮೂಲ ಮಂಜೂರಾತಿದಾರರಿಗೆ ವಾಪಸ್ ಕೊಡಲು ಅವಕಾಶ ಇರುವ ವಿಧೇಯಕ ಇದಾಗಿದೆ.

ಸುಪ್ರೀಂ ಕೋರ್ಟ್ 2017 ರಲ್ಲಿ ಈ ಕಾಯ್ದೆಗೆ ವಿರುದ್ಧವಾಗಿ ತೀರ್ಪು ನೀಡಿತ್ತು. ಮೂಲ ಕಾಯಿದೆಯಲ್ಲಿ ಭೂಮಿ ವಾಪಸ್ ಪಡೆಯಲು ಕಾಲಮಿತಿ ನಿಗದಿ ಇಲ್ಲ ಅಂತ ಕೋರ್ಟ್ ಹೇಳಿತ್ತು. ಆದರೆ ಸರ್ಕಾರದ ಮಟ್ಟದಲ್ಲಿ ಯಾವುದೇ ತಿದ್ದಪಡಿ ಆಗಿರಲಿಲ್ಲ. ಸದ್ಯ ರಾಜ್ಯ ಸರ್ಕಾರವು 1978 ರಿಂದಲೂ ರಾಜ್ಯದಲ್ಲಿ ಜಾರಿಯಲ್ಲಿರುವ ಕಾಯ್ದೆಗೆ ತಿದ್ದುಪಡಿ ಮಾಡಿದೆ.

ಇದನ್ನೂ ಓದಿ: Bengaluru; ಸದನದಲ್ಲಿ ಬುಧವಾರ ನಡೆದ ಅಹಿತಕರ ಘಟನೆಗೆ ಆಡಳಿತ ಪಕ್ಷದ ನಾಯಕನ ಉದ್ಧಟತನವೇ ಕಾರಣ: ಎಚ್ ಡಿ ಕುಮಾರಸ್ವಾಮಿ

ಕಾಯ್ದೆಯಲ್ಲಿನ ಕೆಲವೊಂದು ನ್ಯೂನತೆಗಳನ್ನು ಸರಿಪಡಿಸಿ 1978 ರಲ್ಲಿ ಇದ್ದ ರೂಪದಲ್ಲೇ ತಿದ್ದುಪಡಿ ಮಾಡಲಾಗಿದೆ. ಸದ್ಯ ಈ ತಿದ್ದುಪಡಿ ವಿಧೇಯಕ ಅಂಗೀಕಾರ ಹಿನ್ನೆಲೆಯಲ್ಲಿ ಇದ್ದ ಕಾಲಮಿತಿ ರದ್ದಾಗಲಿದೆ. ಎಷ್ಟೋ ವರ್ಷಗಳ ಹಿಂದೆ ಪರಭಾರೆ ಆಗಿದ್ದರೂ ವಾಪಸ್ ಮೂಲ ದಲಿತ ಮಾಲೀಕರಿಗೆ ಭೂಮಿ ಸಿಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:44 pm, Thu, 20 July 23