ಬಿಗ್​ಬಾಸ್ ಸೀಸನ್ 10ರ ಟಾಪ್ 5 ಯಾರು?​ ವಿನ್ನರ್ ಯಾರಾಗ್ತಾರೆ? ಸ್ನೇಹಿತ್ ಕೊಟ್ಟರು ಉತ್ತರ

Updated on: Dec 15, 2023 | 9:31 PM

Bigg Boss: ಬಿಗ್​ಬಾಸ್ ಸೀಸನ್ 10ರಿಂದ ಕಳೆದ ವಾರವಷ್ಟೆ ಹೊರಗೆ ಬಂದಿರುವ ಸ್ನೇಹಿತ್, ಈ ಬಾರಿಯ ಬಿಗ್​ಬಾಸ್ ಟಾಪ್ 5 ಯಾರು ವಿನ್ನರ್ ಯಾರಾಗಲಿದ್ದಾರೆ? ಎಂದು ಭವಿಷ್ಯ ನುಡಿದಿದ್ದಾರೆ.

ಬಿಗ್​ಬಾಸ್ (BiggBoss) ಸೀಸನ್ 10ರಿಂದ ಕಳೆದ ವಾರ ಸ್ನೇಹಿತ್ (Snehith) ಹೊರಗೆ ಬಂದಿದ್ದಾರೆ. ಎರಡು ಬಾರಿ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಚೆನ್ನಾಗಿಯೇ ಆಡುತ್ತಿದ್ದರು. ಆದರೆ ನಮ್ರತಾ ಹಾಗೂ ವಿನಯ್​ರ ಹಿಂಬಾಲಕರಾಗಿ, ಅವರನ್ನು ಗೆಲ್ಲಿಸುವ ಪ್ರಯತ್ನದಲ್ಲಿ ತಮ್ಮ ಆಟವನ್ನು ಮರೆತ ಕಾರಣ ಸ್ನೇಹಿತ್​ಗೆ ಹಿನ್ನಡೆಯಾಯ್ತು. ಮನೆಯಿಂದ ಹೊರಬಂದಿರುವ ಸ್ನೇಹಿತ್, ಟಿವಿ9 ಜೊತೆ ಮಾತನಾಡಿದ್ದು, ಬಿಗ್​ಬಾಸ್ ಕನ್ನಡ ಸೀಸನ್ 10ರ ಟಾಪ್ 5 ಯಾರಾಗಲಿದ್ದಾರೆ? ಅಂತಿಮವಾಗಿ ಬಿಗ್​ಬಾಸ್ ವಿನ್ನರ್ ಯಾರಾಗಲಿದ್ದಾರೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More