Puneeth Rajkumar: ಸೂರ್ಯ ಗ್ರಹಣದ ದಿನ ಅಪ್ಪು ಸಮಾಧಿ ದರ್ಶನಕ್ಕೆ ಬಂದ ‘ಪವರ್ ಸ್ಟಾರ್’ ಅಭಿಮಾನಿಗಳು
Puneeth Rajkumar Samadhi: ಅಪಾರ ಸಂಖ್ಯೆಯ ಅಭಿಮಾನಿಗಳು ಪುನೀತ್ ರಾಜ್ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿದ್ದಾರೆ. ಪುಷ್ಪ ನಮನ ಸಲ್ಲಿಸಿ ಭಾವುಕರಾಗಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ನಿಧನರಾಗಿ ಒಂದು ವರ್ಷ ಕಳೆದಿದ್ದರೂ ಅವರ ಸಮಾಧಿಗೆ (Puneeth Rajkumar Samadhi) ಭೇಟಿ ನೀಡುವ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ. ಇಂದು (ಅ.25) ಸೂರ್ಯ ಗ್ರಹಣ. ಹಾಗಾಗಿ ಅನೇಕ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಿಲ್ಲ. ಈ ಸಮಯದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಆವರಣದಲ್ಲಿ ಇರುವ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.