Video: ಮೀರತ್​​ನಲ್ಲಿ ಸೈನಿಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಟೋಲ್ ಸಿಬ್ಬಂದಿ

Updated on: Aug 18, 2025 | 11:30 AM

ಟೋಲ್ ಪ್ಲಾಜಾ ಸಿಬ್ಬಂದಿ ಸೈನಿಕನೊಬ್ಬನನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮೀರತ್​​ನಲ್ಲಿ ನಡೆದಿದೆ. ಈ ವಿಡಿಯೋ ಸರೂರ್‌ಪುರ ಪೊಲೀಸ್ ಠಾಣೆ ಪ್ರದೇಶದ ಭುನಿ ಟೋಲ್ ಪ್ಲಾಜಾದದ್ದು ಎಂದು ಹೇಳಲಾಗುತ್ತಿದೆ. ಕಪಿಲ್ ಎಂಬ ಸೈನಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮೀರತ್, ಆಗಸ್ಟ್ 18: ಟೋಲ್ ಪ್ಲಾಜಾ ಸಿಬ್ಬಂದಿ ಸೈನಿಕನೊಬ್ಬನನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮೀರತ್​​ನಲ್ಲಿ ನಡೆದಿದೆ. ಈ ವಿಡಿಯೋ ಸರೂರ್‌ಪುರ ಪೊಲೀಸ್ ಠಾಣೆ ಪ್ರದೇಶದ ಭುನಿ ಟೋಲ್ ಪ್ಲಾಜಾದದ್ದು ಎಂದು ಹೇಳಲಾಗುತ್ತಿದೆ. ಕಪಿಲ್ ಎಂಬ ಸೈನಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕಪಿಲ್ ತನ್ನ ಸ್ನೇಹಿತನೊಂದಿಗೆ ಕಾರಿನಲ್ಲಿ ದೆಹಲಿಯ ಕಡೆಗೆ ಹೋಗುತ್ತಿದ್ದರು ಮತ್ತು ಕರ್ನಾಲ್ ಹೆದ್ದಾರಿಯಲ್ಲಿರುವ ಭುನಿ ಟೋಲ್ ಪ್ಲಾಜಾ ತಲುಪಿದಾಗ, ಟೋಲ್​​ನಲ್ಲಿ ಜಾಮ್ ಬಗ್ಗೆ ಟೋಲ್ ಸಿಬ್ಬಂದಿಯೊಂದಿಗೆ   ವಾಗ್ವಾದ ನಡೆಸಿದ್ದರು ಎಂದು ಹೇಳಲಾಗುತ್ತದೆ.ಈ ವಾಗ್ವಾದ ವಿವಾದದ ರೂಪ ಪಡೆದುಕೊಂಡಿತು.ನಂತರ ವಿಷಯ ಎಷ್ಟು ಉಲ್ಬಣಗೊಂಡಿತ್ತು. ಟೋಲ್ ಸಿಬ್ಬಂದಿ ಅವರನ್ನು ತೀವ್ರವಾಗಿ ಥಳಿಸಿದ್ದಾರೆ. ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

ವಿಡಿಯೋ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ