ಮಗನ ನೇತೃತ್ವದ ಭಾರತ ಜೋಡೊ ಯಾತ್ರೆಗೆ ಸಿಗುತ್ತಿರುವ ಬೆಂಬಲ ಕಂಡು ಸೋನಿಯಾ ಗಾಂಧಿ ಸಂತುಷ್ಟರಾದರು!
ಸೋನಿಯಾ ಗಾಂಧಿ ಅವರು ಗುರುವಾರದಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಅವರ ಮತ್ತು ರಾಹುಲ್ ನಡುವೆ ನಡೆಯುತ್ತಿರುವ ಸಂಭಾಷಣೆ ನೋಡುತ್ತಿದ್ದರೆ ಯಾತ್ರೆಗೆ ಸಿಗುತ್ತಿರುವ ಬೆಂಬಲದಿಂದ ಅವರು ಸಂತುಷ್ಟರಾಗಿರುವಂತಿದೆ.
ಮಂಡ್ಯ: ನಾವು ಆಗಲೇ ಹೇಳಿದಂತೆ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆ ದಸರಾ ಬ್ರೇಕ್ ನಂತರ ಮುಂದುವರಿದಿದೆ. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಅವರ ಮತ್ತು ರಾಹುಲ್ ನಡುವೆ ನಡೆಯುತ್ತಿರುವ ಸಂಭಾಷಣೆ ನೋಡುತ್ತಿದ್ದರೆ ಯಾತ್ರೆಗೆ ಸಿಗುತ್ತಿರುವ ಬೆಂಬಲದಿಂದ ಅವರು ಸಂತುಷ್ಟರಾಗಿರುವಂತೆ ಕಾಣುತ್ತಿದೆ. ರಾಹುಲ್ ಎಡಭಾಗದಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಸೋನಿಯಾ ಗಾಂಧಿ ಬಲಭಾಗದಲ್ಲಿ ಡಿಕೆ ಶಿವಕುಮಾರ ಅವರನ್ನು ಕಾಣಬಹುದು.
Published on: Oct 06, 2022 02:32 PM