ನವದೆಹಲಿ: ಪದೇಪದೆ ಅಸ್ವಸ್ಥರಾಗುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ (Sonia Gandhi) ಪುನಃ ಅಸ್ಪತ್ರೆಗೆ ದಾಖಲಾಗಿದ್ದಾರೆ. ನಮಗೆ ಲಭ್ಯವಾಗಿರವ ಮಾಹಿತಿಯ ಪ್ರಕಾರ ಸೋನಿಯಾ ಗಾಂಧಿ ಜ್ವರದಿಂದ (fever) ಬಳಲುತ್ತಿದ್ದಾರೆ. ಆದರೆ ಕುಟುಂಬದ ಮೂಲಗಳ ಪ್ರಕಾರ ಅವರ ಅರೋಗ್ಯ ಸ್ಥಿರವಾಗಿದ್ದು ಸಾಮಾನ್ಯ ತಪಾಸಣೆಗೋಸ್ಕರ ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ (Gangaram Hospital) ದಾಖಲಿಸಲಾಗಿದೆ. ಇತ್ತೀಚಿಗಷ್ಟೇ ಅವರು ಛತ್ತೀಸ್ ಗಢ್ ನ ರಾಯ್ಪುರ್ ನಲ್ಲಿ ಅಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ಭಾಗವಹಿಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ