Bigg Boss Kannada OTT: ಕೊನೇ ದಿನಕ್ಕಾಗಿ ಸಾನ್ಯಾ ಐಯ್ಯರ್​-ಸೋನು​ ಗೌಡ ನಡುವೆ ಮೇಕಪ್​ ಪೈಪೋಟಿ

| Updated By: ಮದನ್​ ಕುಮಾರ್​

Updated on: Sep 16, 2022 | 5:54 PM

Sonu Srinivas Gowda | Sanya Iyer: ಸೋನು ಶ್ರೀನಿವಾಸ್​ ಗೌಡ ಮತ್ತು ಸಾನ್ಯಾ ಐಯ್ಯರ್​ ಅವರು ಫಿನಾಲೆ ಸಂಚಿಕೆಗೆ ಈ ರೀತಿ ಸಜ್ಜಾಗಿದ್ದಾರೆ. ಮೇಕಪ್​ ಮಾಡಿಕೊಳ್ಳುವಲ್ಲಿ ಅವರು ಮಗ್ನರಾದ ವಿಡಿಯೋ ಇಲ್ಲಿದೆ..

ಪ್ರತಿ ವಿಕೆಂಡ್​ ಬಂದಾಗಲೂ ಬಿಗ್​​ ಬಾಸ್​ ಸ್ಪರ್ಧಿಗಳು ಭರ್ಜರಿಯಾಗಿ ಮೇಕಪ್​ ಮಾಡಿಕೊಂಡು ಸುಂದರವಾಗಿ ಕಾಣಲು ಪ್ರಯತ್ನಿಸುತ್ತಾರೆ. ಇನ್ನು, ಫಿನಾಲೆ ಎಪಿಸೋಡ್​ ಎಂದರೆ ಕೇಳಬೇಕಾ? ಇಂದು (ಸೆ.16) ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋ ಫಿನಾಲೆ (Bigg Boss Kannada OTT finale) ನಡೆಯುತ್ತಿದೆ. 8 ಸ್ಪರ್ಧಿಗಳಲ್ಲಿ 4 ಜನರಿಗೆ ಇಲ್ಲಿಂದ ನೇರವಾಗಿ ಟಿವಿ ಸೀಸನ್​ಗೆ ಎಂಟ್ರಿ ಸಿಗಲಿದೆ. ಕಿಚ್ಚ ಸುದೀಪ್​ ಅವರು ಆ ನಾಲ್ಕು ಜನರ ಹೆಸರನ್ನು ಘೋಷಿಸುವ ಸಮಯ ಹತ್ತಿರ ಬಂದಿದೆ. ಅದಕ್ಕೂ ಮುನ್ನ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಮತ್ತು ಸಾನ್ಯಾ ಅಯ್ಯರ್​ ಅವರು ಮೇಕಪ್​ ಮಾಡಿಕೊಳ್ಳುವುದರಲ್ಲಿ ಮಗ್ನವಾಗಿರುವುದು ಬಿಗ್​ ಬಾಸ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ವಿಡಿಯೋ ಇಲ್ಲಿದೆ. ಸೋನು ಮತ್ತು ಸಾನ್ಯಾ (Sanya Iyer) ಅವರು ದೊಡ್ಮನೆಯಲ್ಲಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ.