‘50 ಕ್ಯಾಮೆರಾ ಮುಚ್ಚಿಸೋಕೆ ಆಗಲ್ಲ’: ಸೋನು ಗೌಡ ಬಿಗ್​ ಬಾಸ್​ ಮನೆಯಲ್ಲಿ ಹೀಗೆ ಹೇಳಿದ್ದೇಕೆ? 

| Updated By: ಮದನ್​ ಕುಮಾರ್​

Updated on: Sep 11, 2022 | 4:28 PM

Sonu Srinivas Gowda: ಆರ್ಯವರ್ಧನ್​ ಗುರೂಜಿ ಮಾತುಗಳಿಗೆ ಸೋನು ಗೌಡ ಅವರು ಖಡಕ್​ ತಿರುಗೇಟು ನೀಡುತ್ತಿದ್ದಾರೆ. ಹಲವು ವಿಚಾರಗಳಲ್ಲಿ ಇಬ್ಬರೂ ವಾಗ್ವಾದ ಮಾಡಿಕೊಳ್ಳುತ್ತಿದ್ದಾರೆ.

ರೀಲ್ಸ್​ ಮೂಲಕ ಫೇಮಸ್​ ಆದ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರ ಜನಪ್ರಿಯತೆ ಈಗ ಇನ್ನಷ್ಟು ಹೆಚ್ಚಿದೆ. ಬಿಗ್​ ಬಾಸ್​ ರಿಯಾಲಿಟಿ ಶೋ ಮೂಲಕ ಅವರು ಮನೆಮಾತಾಗಿದ್ದಾರೆ. ವೂಟ್​ ಸೆಲೆಕ್ಟ್​ ಮೂಲಕ ಪ್ರಸಾರ ಆಗುತ್ತಿರುವ ‘ಬಿಗ್ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋ ಐದನೇ ವಾರಕ್ಕೆ ಕಾಲಿಟ್ಟಿದೆ. ಮುಂದಿನ ವಾರವೇ ಫಿನಾಲೆ. ಈಗ ಮನೆಯಲ್ಲಿ ಉಳಿದಿರುವುದು 8 ಜನರು ಮಾತ್ರ. ಆರ್ಯವರ್ಧನ್​ ಗುರೂಜಿ (Aryavardhan Guruji) ಮಾತುಗಳಿಗೆ ಸೋನು ಗೌಡ ಅವರು ಖಡಕ್​ ತಿರುಗೇಟು ನೀಡುತ್ತಿದ್ದಾರೆ. ಏನೋ ಹೇಳಲು ಬಂದ ಸೋನುಗೆ ಗುರೂಜಿ ವಿರೋಧ ವ್ಯಕ್ತಪಡಿಸಿದರು. ‘ನೀವು ನನ್ನೊಬ್ಬಳ ಬಾಯಿ ಮುಚ್ಚಿಸಬಹುದು. ಆದರೆ 50 ಕ್ಯಾಮೆರಾ ಮುಚ್ಚಿಸೋಕೆ ಆಗಲ್ಲ’ ಎಂದಿದ್ದಾರೆ ಸೋನು. ಒಟಿಟಿ ಆವೃತ್ತಿ ಮುಗಿದ ಬಳಿಕ ಟಿವಿಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಆರಂಭ ಆಗಲಿದೆ.

 

Published on: Sep 11, 2022 04:28 PM