ಕೊಣ್ಣೂರಿಗೆ ಬಂದಾಗ ಸೋಫಿಯಾ ಖುರೇಷಿ ಒಬ್ಬ ಸಾಮಾನ್ಯ ಮುಸ್ಲಿಂ ಮಹಿಳೆಯಂತಿರುತ್ತಾರೆ: ಸೋಫಿಯ ಮೈದುನ

ಅರುಣ್​ ಕುಮಾರ್​ ಬೆಳ್ಳಿ

Updated on: May 08, 2025 | 2:35 PM

ಟಿವಿ9ನೊಂದಿಗೆ ಮಾತಾಡಿರುವ ಕರ್ನಲ್ ತಾಜುದ್ದೀನ್ ಅವರ ಸಹೋದರ, ತನ್ನ ಅತ್ತಿಗೆ ಮನೆಗೆ ಬಂದಾಗ ಒಬ್ಬ ಸಾಮಾನ್ಯ ಮುಸ್ಲಿಂ ಮಹಿಳೆಯಂತಿರುತ್ತಾರೆ, ಎಲ್ಲರೊಂದಿಗೆ ಹೊಂದಿಕೊಳ್ಳುತ್ತಾರೆ, ಸೇನೆಯಲ್ಲಿ ಅಧಿಕಾರಿಯೆಂಬ ಅಹಂ ಸ್ವಲ್ಪವೂ ಇಲ್ಲ, ರಂಜಾನ್ ಹಬ್ಬಕ್ಕೆ ಅವರು ಬರಬೇಕಿತ್ತು, ರಜೆ ಸಿಗದ ಕಾರಣ ಬರಲಿಲ್ಲ, ಬಕ್ರೀದ್​ಗೆ ಬರುವ ನಿರೀಕ್ಷೆಯಿದೆ, ಅದರೆ ಯುದ್ಧ ಆರಂಭವಾದರೆ ಬರಲಾರರು ಎಂದು ಹೇಳಿದರು.

ಬೆಳಗಾವಿ, ಮೇ 8: ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಇವತ್ತು ಕರ್ನಾಟಕ ಮಾತ್ರವಲ್ಲ ಇಡೀದೇಶದಲ್ಲಿ ಜನಜನಿತ ಹೆಸರು. ಅವರು ಬೆಳಗಾವಿಯ ಸೊಸೆ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಅವರ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ (Colonel Tajuddin Bagewadi) ಅವರ ಹುಟ್ಟೂರು ಕೊಣ್ಣೂರಲ್ಲಿರುವ ಮನೆಯನ್ನು ನಮ್ಮ ಬೆಳಗಾವಿ ವರದಿಗಾರ ವಿಡಿಯೋದಲ್ಲಿ ತೋರಿಸಿದ್ದಾರೆ. ಮನೆಯಲ್ಲಿ ಕರ್ನಲ್ ತಾಜುದ್ದೀನ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮತ್ತು ಪತ್ನಿ ಸೋಫಿಯಾ ಅವರೊಂದಿಗಿರುವ ಫೋಟೋ ಫ್ರೇಮ್​ಗಳನ್ನು ನೋಡಬಹುದು. ವರದಿಗಾರ ಹೇಳುವಂತೆ ಊರಿನ ಜನ ಮನೆಗೆ ಆಗಮಿಸಿ ತಾಜುದ್ದೀನ್ ಕುಟುಂಬಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ:  ಆಪರೇಷನ್ ಸಿಂಧೂರ್: ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಯಾರು? ಇಲ್ಲಿದೆ ಮಾಹಿತಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.