N Cheluvarayaswamy: ಕೃಷಿ ಸಚಿವರೇ, ದಾವಣಗೆರೆಯ ಜಗಳೂರು ರೈತರಿಗೆ ಕೃಷಿ ಇಲಾಖೆ ಪೂರೈಸಿರೋದು ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳು!

|

Updated on: Jul 15, 2023 | 6:10 PM

ಅನ್ನದಾತರು ಕೃಷಿ ಇಲಾಖೆಗೆ ಹೋಗಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಆದರೆ ಅವರದ್ದು ಎಂದಿನ ನಿರ್ಲಕ್ಷ್ಯ ದೋರಣೆ.

ದಾವಣಗೆರೆ: ಇದು ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ (N Cheluvarayaswamy:) ಅವರ ಗಮನಕ್ಕ. ಜಿಲ್ಲೆಯ ಜಗಳೂರಲ್ಲಿ ಕೃಷಿ ಇಲಾಖೆಯ (agriculture department) ವತಿಯಿಂದ ಭಾಗದ ರೈತರಿಗೆ ಪೂರೈಕೆಯಾಗುತ್ತಿರುವ ಬಿತ್ತನೆ ಬೀಜ (sowing seeds) ಅತ್ಯಂತ ಕಳಪೆ ಗುಣಮಟ್ಟವಾಗಿದ್ದು ಕಂಗಾಲಾಗಿರುವ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರೈತರೊಬ್ಬರು ತೊಗರಿ ಬೀಜ ಯಾವ ಮಟ್ಟಿಗೆ ಕಳಪೆಯಾಗಿದೆ ಅನ್ನೋದನ್ನು ತೋರಿಸುತ್ತಿದ್ದಾರೆ. ಹುಳು ಹಿಡಿದ ಬೀಜಗಳನ್ನು ಪೂರೈಸುತ್ತಿದ್ದಾರೆ ಅನ್ನೋದನ್ನು ಸಚಿವರು ಗಮನಿಸಬೇಕು. ಮಾನ್ಸೂನ್ ವಿಳಂಬಗೊಂಡಿರುವುದರಿಂದ ರೈತರು ಈಗಾಗಲೇ ಕಂಗಾಲಾಗಿದ್ದಾರೆ ಮೇಲಿಂದ ಈ ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳು. ಅನ್ನದಾತರು ಕೃಷಿ ಇಲಾಖೆಗೆ ಹೋಗಿ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಆದರೆ ಅವರದ್ದು ಎಂದಿನ ನಿರ್ಲಕ್ಷ್ಯ ದೋರಣೆ. ಹಾಗಾಗೇ, ಖುದ್ದು ಚೆಲುವರಾಯಸ್ವಾಮಿಯವರೇ ಫೀಲ್ಡಿಗಿಳಿಯಬೇಕಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ