Mandya: ಕಾರ್ಯಕ್ರಮವೊಂದಕ್ಕೆ ಸುಮಲತಾ ಅಬರೀಷ್ ಮತ್ತು ಚೆಲುವರಾಯಸ್ವಾಮಿ ಇಬ್ಬರೂ ಆಹ್ವಾನಿತರು ಆದರೆ ವೇದಿಕೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ!

Mandya: ಕಾರ್ಯಕ್ರಮವೊಂದಕ್ಕೆ ಸುಮಲತಾ ಅಬರೀಷ್ ಮತ್ತು ಚೆಲುವರಾಯಸ್ವಾಮಿ ಇಬ್ಬರೂ ಆಹ್ವಾನಿತರು ಆದರೆ ವೇದಿಕೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 15, 2023 | 4:46 PM

ಈಗಷ್ಟೇ ಮಿನಿಸ್ಟ್ರಾಗಿರುವ ಚೆಲುವರಾಯಸ್ವಾಮಿ ಇಲ್ಲಿ ಪ್ರದರ್ಶಿಸಿದ್ದು ಅಟಿಟ್ಯೂಡಾ? ಹೌದಾದರೆ ಕನ್ನಡಿಗರಿಗೆ ಅದು ಸ್ವೀಕೃತವಲ್ಲ.

ಮಂಡ್ಯ: ನಮ್ಮ ರಾಜಕಾರಣಿಗಳ ವರಸೆಗಳೇ ಅರ್ಥವಾಗಲ್ಲ ಮಾರಾಯ್ರೇ. ಬೇರೆ ಬೇರೆ ಪಕ್ಷಗಳ ನಾಯಕರ ನಡುವೆ ವೈಮನಸ್ಸು, ದ್ವೇಷ ಇರೋದು ಸತ್ಯ. ಹಾಗಂತ ಅವರು ಅದನ್ನು ಕಂಡಲ್ಲೆಲ್ಲ ಅದರಲ್ಲೂ ವಿದ್ಯಾರ್ಥಿಗಳ ಎದುರು ಪ್ರದರ್ಶಿಸಬಾರದು. ವಿದ್ಯಾರ್ಥಿಗಳ ನಡುವೆ ರಾಜಕಾರಣಿಗಳ ಬಿಹೇವಿಯರ್ (behaviour) ಸಹ್ಯ ಮತ್ತು ಅನುಕರಣೀಯವಾಗಿರಬೇಕು. ಅದರೆ, ಮಂಡ್ಯದಲ್ಲಿ ಇವತ್ತು ಏನು ನಡೆಯಿತು ಅನ್ನೋದನ್ನ ನೋಡಿ, ಮಂಡ್ಯ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಕಾರ್ಯಕ್ರಮವೊಂದಕ್ಕೆ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಮತ್ತು ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ (N Cheluvarayaswamy) ಮತ್ತು ಸುಮಲತಾ ಇಬ್ಬರೂ ಕಾರ್ಯಕ್ರಮಕ್ಕೆ ಆಹ್ವಾನಿತರು ಅಥವಾ ಅತಿಥಿಗಳು. ಆದರೆ, ವೇದಿಕೆ ಮೇಲೆ ಅವರು ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಮಲತಾ ಖಾಲಿ ವೇದಿಕೆ ಮೇಲೆ ನಿಂತು ಭಾಷಣ ಮಾಡಿದರು. ಅವರು ಅಲ್ಲಿಂದ ನಿರ್ಗಮಿಸಿದ ಬಳಿಕ ಚೆಲುವರಾಯಸ್ವಾಮಿ ವೇದಿಕೆಗೆ ಬಂದರು. ಈಗಷ್ಟೇ ಮಿನಿಸ್ಟ್ರಾಗಿರುವ ಚೆಲುವರಾಯಸ್ವಾಮಿ ಇಲ್ಲಿ ಪ್ರದರ್ಶಿಸಿದ್ದು ಅಟಿಟ್ಯೂಡಾ? ಹೌದಾದರೆ ಕನ್ನಡಿಗರಿಗೆ ಅದು ಸ್ವೀಕೃತವಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ