ಸೌಜನ್ಯಾ ಕೇಸ್: ಕೊನೆಯದಾಗಿ ನೋಡಿದ ಐವರನ್ನು ವಿಚಾರಣೆಗೆ ಒಳಪಡಿಸಿದ ಎಸ್ಐಟಿ
ಸೌಜನ್ಯಾ ಕೊಲೆ ಪ್ರಕರಣದ ಎಸ್ಐಟಿ ತನಿಖೆ ಚುರುಕುಗೊಂಡಿದ್ದು, ಎಸ್ಐಟಿ ಕಚೇರಿಯಲ್ಲಿ ಮತ್ತೆ ವಿಚಾರಣೆ ಆರಂಭವಾಗಿದೆ. ಸೌಜನ್ಯಾಳನ್ನು ಕೊನೆಯದಾಗಿ ನೋಡಿದ ಆಕೆಯ ಮಾವ ವಿಠಲ ಗೌಡ, ಸಾಕ್ಷಿಗಳಾದ ಕೃಷ್ಣಪ್ಪ, ಪುರಂದರ ಗೌಡ, ಯಶೋಧ ಮತ್ತು ಅವರ ಪುತ್ರ ಪ್ರತೀಕ್ ಸೇರಿದಂತೆ ಐವರ ಹೇಳಿಕೆಗಳನ್ನು ಎಸ್ಐಟಿ ತಂಡ ದಾಖಲಿಸಿಕೊಳ್ಳುತ್ತಿದೆ. ಈ ಪ್ರಕರಣದ ಮರುತನಿಖೆ ಚುರುಕುಗೊಂಡಿದೆ.
ಮಂಗಳೂರು, ನವೆಂಬರ್ 14: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್ಐಟಿ) ಚುರುಕುಗೊಳಿಸಿದೆ. ಇಂದು (ಬುಧವಾರ, ನವೆಂಬರ್ 14) ಎಸ್ಐಟಿ ಕಚೇರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ವಿಚಾರಣೆ ಆರಂಭಗೊಂಡಿದೆ. ಈ ಮರುತನಿಖೆಯ ಭಾಗವಾಗಿ, ಸೌಜನ್ಯಾಳನ್ನು ಕೊನೆಯದಾಗಿ ನೋಡಿದ ಐವರು ಪ್ರಮುಖ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸೌಜನ್ಯಾ ಮಾವ ವಿಠಲ ಗೌಡ, ಸಾಕ್ಷಿಗಳಾದ ಕೃಷ್ಣಪ್ಪ, ಪುರಂದರ ಗೌಡ, ಯಶೋಧ ಮತ್ತು ಅವರ ಪುತ್ರ ಪ್ರತೀಕ್ ಅವರನ್ನು ಎಸ್ಐಟಿ ವಿಚಾರಣೆ ನಡೆಸುತ್ತಿದೆ. ಈ ಐವರ ಹೇಳಿಕೆಗಳನ್ನು ಎಸ್ಐಟಿ ತಂಡವು ದಾಖಲಿಸಿಕೊಳ್ಳುತ್ತಿದೆ. ಎಸ್ಐಟಿ ಕಚೇರಿಗೆ ತನಿಖಾಧಿಕಾರಿ ಲೋಕೇಶ್ ಮತ್ತು ಸಹ ತನಿಖಾಧಿಕಾರಿ ಮನೋಜ್ ನಾಯಕ್ ಅವರು ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ.
ಮರುತನಿಖೆಗೆ ಆದೇಶ ಸಿಕ್ಕ ಬೆನ್ನಲ್ಲೇ ಎಸ್ಐಟಿ ತಂಡವು ಹಲವು ಮಹತ್ವದ ಬೆಳವಣಿಗೆಗಳನ್ನು ಕೈಗೊಂಡಿದೆ. ಈ ಹಿಂದಿನ ತನಿಖಾ ಸಂಸ್ಥೆಗಳಿಂದಲೂ ಕೂಡ ದಾಖಲೆಗಳನ್ನು ಮತ್ತು ಮಾಹಿತಿಯನ್ನು ಎಸ್ಐಟಿ ತಂಡ ಸಂಗ್ರಹಿಸಿದೆ. ಸೌಜನ್ಯಾ ಹತ್ಯೆಯಾದ ಸ್ಥಳ ಮತ್ತು ಆಕೆಯ ಮೃತದೇಹ ಸಿಕ್ಕ ಸ್ಥಳದಲ್ಲಿ ಮಹಜರು ಕೂಡ ನಡೆಸಲಾಗಿತ್ತು. ಪ್ರಸ್ತುತ, ಪ್ರಕರಣದ ತನಿಖೆ ಮಹತ್ವದ ಹಂತ ತಲುಪಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
