ಚುರುಕುಗೊಂಡ ಸೌಜನ್ಯ ಕೇಸ್ ಮರುತನಿಖೆ: ಎಸ್‌ಐಟಿ ಮುಂದೆ ಹಾಜರಾದ ಅಂದಿನ ಪೊಲೀಸ್ ಅಧಿಕಾರಿಗಳು
ಸೌಜನ್ಯ ಕೊಲೆ ಪ್ರಕರಣದ ಎಸ್‌ಐಟಿ ಮರುತನಿಖೆ ತೀವ್ರಗೊಂಡಿದ್ದು, ತನಿಖಾಧಿಕಾರಿಯಾಗಿದ್ದ ಅಂದಿನ ಇನ್‌ಸ್ಪೆಕ್ಟರ್ ಭಾಸ್ಕರ್ ರೈ, ಪಿಎಸ್‌ಐ ಯೋಗೇಶ್ ಹಾಗೂ ಸಿಐಡಿ ಡಿವೈಎಸ್‌ಪಿ ರುದ್ರಮುನಿ ಮಂಗಳೂರಿನಲ್ಲಿ ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಮಂಗಳೂರಿನ ಹಳೇ ಡಿಸಿ ಕಚೇರಿ ಕಟ್ಟಡದಲ್ಲಿರುವ ಎಸ್‌ಐಟಿ ಕಚೇರಿಗೆ ಹಲವು ಫೈಲ್‌ಗಳ ಸಮೇತ ಇವರು ವಿಚಾರಣೆಗೆ ಹಾಜರಾಗಿದ್ದು, ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಅವರನ್ನು ವಿಚಾರಣೆ ನಡೆಸಲಾಗಿದೆ.
ಮಂಗಳೂರು, ಅಕ್ಟೋಬರ್ 29: ಸೌಜನ್ಯ ಪ್ರಕರಣದ ಬಗ್ಗೆ ಎಸ್ಐಟಿಯಿಂದ ಮರು ತನಿಖೆ ಚುರುಕುಗೊಂಡಿದ್ದು, ಅಂದಿನ ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಭಾಸ್ಕರ್ ರೈ, ಪಿಎಸ್‌ಐ ಯೋಗೇಶ್, ಅಂದಿನ ಸಿಐಡಿ ಡಿವೈಎಸ್‌ಪಿ ರುದ್ರಮುನಿ SIT ವಿಚಾರಣೆಗೆ ಹಾಜರಾಗಿದ್ದಾರೆ. ಇನ್ಸ್‌ಪೆಕ್ಟರ್ ಭಾಸ್ಕರ್ ರೈ ಈ ಹಿಂದೆ ಸೌಜನ್ಯಾ ಕೇಸ್‌ನ ತನಿಖಾಧಿಕಾರಿಯಾಗಿದ್ದರು. ಮಂಗಳೂರಿನ ಹಳೇ ಡಿಸಿ ಕಚೇರಿ ಕಟ್ಟಡದಲ್ಲಿರುವ ಎಸ್‌ಐಟಿ ಕಚೇರಿಗೆ ಹಲವು ಫೈಲ್‌ಗಳ ಸಮೇತ ಇವರು ವಿಚಾರಣೆಗೆ ಹಾಜರಾಗಿದ್ದು, ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಎಸಿಪಿ ಮನೋಜ್ ಕುಮಾರ್ ನಾಯ್ಕ್‌ರಿಂದ ಮೂವರ ವಿಚಾರಣೆ ನಡೆಸಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 29, 2026 12:05 PM
Loading...
Unable to load recommendations.
Follow Us
