Loading video

ಉಡಾವಣೆಗೊಂಡು ಕೆಲವೇ ನಿಮಿಷಗಳಲ್ಲಿ ಸ್ಫೋಟಗೊಂಡ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್

|

Updated on: Jan 17, 2025 | 10:29 AM

ಸ್ಪೇಸ್‌ಎಕ್ಸ್‌ನ ಹೊಸ ಸ್ಟಾರ್‌ಶಿಪ್ ರಾಕೆಟ್ ಬೂಸ್ಟರ್ ಉಡಾವಣೆ ಸಮಯದಲ್ಲಿ ಸ್ಫೋಟಗೊಂಡಿದೆ. ಉಡಾವಣಾ ಪ್ಯಾಡ್​ನಿಂದ ಟೇಕ್​ಆಫ್​ ಆದ ಕೂಡಲೇ ಬಾಹ್ಯಾಕಾಶ ನೌಕೆ ಸಂಪರ್ಕ ಕಳೆದುಕೊಂಡು ನಾಶವಾಯಿತು. ಎಲೋನ್ ಮಸ್ಕ್ ಈ ಸ್ಫೋಟದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿನ ಉಡಾವಣಾ ಪ್ಯಾಡ್‌ನಿಂದ ಸಂಜೆ 5.38 ಕ್ಕೆ ಉಡಾವಣೆಯಾದ ಎಂಟು ನಿಮಿಷಗಳ ನಂತರ ರಾಕೆಟ್‌ನೊಂದಿಗಿನ ಸಂಪರ್ಕವು ಕಳೆದುಹೋಯಿತು.ಇದು ಈ ವರ್ಷದ ಮೊದಲ ಪರೀಕ್ಷಾರ್ಥ ಹಾರಾಟವಾಗಿತ್ತು.

ಆದರೆ ಕೊನೆಯಲ್ಲಿ ಸ್ಟಾರ್ಶಿಪ್ ಕಳೆದುಹೋಯಿತು. ದಕ್ಷಿಣ ಟೆಕ್ಸಾಸ್‌ನಲ್ಲಿ ಏಪ್ರಿಲ್‌ನಲ್ಲಿ ಮೊದಲ ಉಡಾವಣೆಯೂ ವಿಫಲವಾಗಿದೆ. ಉಡಾವಣೆಯಾದ ಸ್ವಲ್ಪ ಸಮಯದ ನಂತರ ಅದು ಸ್ಫೋಟದಿಂದ ನಾಶವಾಯಿತು. ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಸ್ಟಾರ್‌ಶಿಪ್ ಅಪಘಾತಕ್ಕೀಡಾಗಿದೆ. ಆದರೆ, ಯಾರಿಗೂ ಗಾಯಗಳಾಗಿಲ್ಲ. ಮೊದಲ ಮಿಷನ್ ವಿಫಲವಾದ ನಂತರ ಕಂಪನಿಯು ಹಲವಾರು ಸುಧಾರಣೆಗಳನ್ನು ಮಾಡಿತು. ಇದರ ಹೊರತಾಗಿಯೂ, ಮತ್ತೊಮ್ಮೆ ವೈಫಲ್ಯ ಕಂಡುಬಂದಿದೆ. ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ನೌಕೆಯ ತುಂಡುಗಳು ಆಕಾಶದಲ್ಲಿ ಬೀಳುತ್ತಿರುವುದು ಕಂಡುಬರುತ್ತದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jan 17, 2025 10:11 AM