ಸ್ಪಂದನ ಅಂತ್ಯ ಸಂಸ್ಕಾರ: ಅಮ್ಮನ ಅಂತಿಮ ಯಾತ್ರೆಯಲ್ಲಿ ಅಪ್ಪನ ಪಕ್ಕ ಕೂತ ಶೌರ್ಯ ವಾಸ್ತವದೊಂದಿಗೆ ಏಗಲು ಪ್ರಯತ್ನಿಸುತ್ತಿದ್ದ!

ಅರುಣ್​ ಕುಮಾರ್​ ಬೆಳ್ಳಿ

Updated on: Aug 09, 2023 | 4:50 PM

ತಾನು ಓಕೆ ಆಗಿಲ್ಲ ಅಂತ ಅವನಿಗೆ ಚೆನ್ನಾಗಿ ಗೊತ್ತಿದೆ ಮತ್ತು ವಿಜಯ್ ಅವನಿಗಿಂತ ಚೆನ್ನಾಗಿ ಅದನ್ನು ಅರ್ಥಮಾಡಿಕೊಂಡಿದ್ದಾರೆ. ಶೌರ್ಯನಿಗೆ ಧೈರ್ಯ ಹೇಳಿದ ಬಳಿಕ ವಿಜಯ್ ಕಣ್ಣುಮುಚ್ಚಿ ನಿಟ್ಟುಸಿರಾಗುತ್ತಾರೆ. ಮಕ್ಕಳ ಗತಿ ಏನು ಎಂಬ ಯೋಚನೆ ಅವರಲ್ಲಿ ಬಂದಿರುತ್ತದೆ.

ಬೆಂಗಳೂರು: ವಿಜಯ ರಾಘವೇಂದ್ರ ಮತ್ತು ಸ್ಪಂದನ ಮಗ ಶೌರ್ಯನಿಗೆ (Shourya) ತಾನೀಗ ತಬ್ಬಲಿ ಅನ್ನೋದು ಮನವರಿಕೆಯಾಗಿದೆ ಆದರೆ ಆ ಸಂಗತಿಯನ್ನು ಅರಗಿಸಿಕೊಳ್ಳುವುದು ಮತ್ತು ವಾಸ್ತವದೊಂದಿಗೆ ಏಗುವುದು 14ರ ಪೋರನಿಗೆ ಸಾಧ್ಯವಾಗುತ್ತಿಲ್ಲ. ಅಮ್ಮನ ಅಂತಿಮ ಯಾತ್ರೆಯಲ್ಲಿ (funeral march) ಅಪ್ಪ ಮತ್ತು ಚಿಕ್ಕಪ್ಪ ನಡುವೆ ಕೂತಿರುವ ಅವನಲ್ಲಿ ದುಃಖ ಮಡುಗಟ್ಟಿದೆ, ಮೂರು ದಿನಗಳಿಂದ ಅತ್ತು ಕಣ್ಣೀರು (tears) ಕೂಡ ಬತ್ತಿಹೋಗಿದೆ. ಅವನಲ್ಲಿ ಧೈರ್ಯ ತುಂಬುವ ಪ್ರಯತ್ನ ವಿಜಯ ಮಾಡುತ್ತಾರೆ. ಅವನು ತಾನು ಓಕೆ ಅಂತ ಹೇಳುವ ಹಾಗೆ ಅಪ್ಪನ ಮುಖ ನೋಡುತ್ತಾ ತಲೆಯಾಡಿಸುತ್ತಾನೆ. ತಾನು ಓಕೆ ಆಗಿಲ್ಲ ಅಂತ ಅವನಿಗೆ ಚೆನ್ನಾಗಿ ಗೊತ್ತಿದೆ ಮತ್ತು ವಿಜಯ್ ಅವನಿಗಿಂತ ಚೆನ್ನಾಗಿ ಅದನ್ನು ಅರ್ಥಮಾಡಿಕೊಂಡಿದ್ದಾರೆ. ಶೌರ್ಯನಿಗೆ ಧೈರ್ಯ ಹೇಳಿದ ಬಳಿಕ ವಿಜಯ ಕಣ್ಣುಮುಚ್ಚಿ ನಿಟ್ಟುಸಿರಾಗುತ್ತಾರೆ. ಮಕ್ಕಳ ಗತಿ ಏನು ಎಂಬ ಯೋಚನೆ ಅವರಲ್ಲಿ ಬಂದಿರುತ್ತದೆ. ಅತ್ಯಂತ ಭಾವುಕ ಕ್ಷಣಗಳಿವು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.