ದೂರು ಕೊಡಲು ಪೊಲೀಸ್ ಸ್ಟೇಷನ್ ಗೆ ಬಂತಾ ಗುಬ್ಬಚ್ಚಿ ಮರಿ?

Edited By: ಸಾಧು ಶ್ರೀನಾಥ್​

Updated on: Jul 06, 2023 | 4:06 PM

ಒಂದು ಗಂಟೆ ಕಾಲ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದ ಗುಬ್ಬಚ್ಚಿ ಮರಿ ಅಲ್ಲಿಂದ ಪುರ್​ ಅಂತಾ ಹೊರಗೆ ಹಾರಿಹೋಯಿತು. ಠಾಣೆಗೆ ಬಂದ ಗುಬ್ಬಚ್ಚಿ ಮರಿ ಕಂಡು ಪೊಲೀಸರು ಅಚ್ಚರಿ ವ್ಯಕ್ತಪಡಿಸಿದರಾದರೂ ಅದು ಕೊನೆಗೆ ಬೇರೆಡೆ ಹಾರಿ ಹೋಗಿದ್ದನ್ನು ಕಂಡು ಪೆಚ್ಚು ಮೋರೆ ಹಾಕಿಕೊಂಡರು.

ಬಾಗಲಕೋಟೆ ನವನಗರದ ಟ್ರಾಫಿಕ್ ಸ್ಟೇಷನ್ (bagalkot navanagar traffic police station) ನಲ್ಲಿ ಅಪರೂಪದ ಘಟನೆಯೊಮದು ನಡೆದಿದ್ದು ದೂರು ಕೊಡಲು ಗುಬ್ಬಚ್ಚಿ (sparrow) ಮರಿಯೊಂದು ಪೊಲೀಸ್ ಸ್ಟೇಷನ್ ಗೆ ಬಂದಂತಿತ್ತು. ನೇರವಾಗಿ ಪೊಲೀಸ್ ಠಾಣೆ ಒಳಗೆ ಬಂದು, ಸಿನಿಯರ್ ಹೆಡ್ ಕಾನ್ಸ್​​​ಟೇಬಲ್ ಟೇಬಲ್ ಬಳಿ ಗುಬ್ಬಚ್ಚಿ ಮರಿ ಬಂದು ಕುಳಿತಿತ್ತು. ಆ ವೇಳೆ ಮಹಿಳಾ ಕಾನ್ಸ್‌ಟೇಬಲ್ ಗುಬ್ಬಿ ಮರಿ ಜೊತೆ ಕ್ಯೂಟ್ ಆಗಿ ಮಾತಾಡಿದರು. ಕಂಪ್ಲೆಂಟ್ ಕೊಡಬೇಕಿತ್ತಾ? ಯಾರ ಮೇಲೆ ದೂರು ಕೊಡಲು ಬಂದಿದ್ದೀಯಾ? ಪೇಪರ್ ಕೊಡು, ಕಂಪ್ಲೇಂಟ್ ಬರೆದು ಕೊಡ್ತೀಯಾ ಎಂದು ಆ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಗುಬ್ಬಚ್ಚಿ ಮರಿಗೆ ಪ್ರಶ್ನೆ‌ ಮಾಡಿದರು. ಒಂದು ಗಂಟೆ ಕಾಲ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದ ಗುಬ್ಬಚ್ಚಿ ಮರಿ ಅಲ್ಲಿಂದ ಪುರ್​ ಅಂತಾ ಹೊರಗೆ ಹಾರಿಹೋಯಿತು. ಠಾಣೆಗೆ ಬಂದ ಗುಬ್ಬಚ್ಚಿ ಮರಿ ಕಂಡು ಪೊಲೀಸರು ಅಚ್ಚರಿ ವ್ಯಕ್ತಪಡಿಸಿದರಾದರೂ ಅದು ಕೊನೆಗೆ ಬೇರೆಡೆ ಹಾರಿ ಹೋಗಿದ್ದನ್ನು ಕಂಡು ಪೆಚ್ಚು ಮೋರೆ ಹಾಕಿಕೊಂಡರು.

Published on: Jul 06, 2023 04:05 PM
Loading...
Unable to load recommendations.
Follow Us
ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More