Karnataka Assembly Session: ಕರಾವಳಿ ಭಾಗದ ಜನ ಬುದ್ಧಿವಂತರು ಅಂತ ಯತ್ನಾಳ್ ಹೇಳಿದಾಗ ಸ್ಪೀಕರ್ ಮುಗಳ್ನಕ್ಕರು!

|

Updated on: Dec 18, 2024 | 1:09 PM

Karnataka Assembly Session: ಉತ್ತರ ಕರ್ನಾಟಕದ ಬಗ್ಗೆ ಮಾತು ಮುಂದುವರೆಸುವ ಯತ್ನಾಳ್, ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಈ ಭಾಗದ ಅರಸರಿಗೆ ಉತ್ತರ ಭಾರತದ ಅರಸರು ಹೆದರುತ್ತಿದ್ದರು, ಇಮ್ಮಡಿ ಪುಲಕೇಶಿಯ ಹೆಸರನ್ನು ಉಲ್ಲೇಖಿಸಿ, ಚಿತ್ರದುರ್ಗದ ಮದಕರಿ ನಾಯಕ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮೊದಲಾದವರೆಲ್ಲ ಬ್ರಿಟಿಷರ ವಿರುದ್ಧ ಹೋರಾಡಿದ್ದರು ಎಂದರು.

ಬೆಳಗಾವಿ: ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಚರ್ಚೆ ನಡೆಯುವಾಗ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕರಾವಳಿ ಭಾಗದ ಜನ ಬುದ್ಧಿವಂತರು, ಬುದ್ಧಿಜೀವಿಗಳು ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲರು, ಸಭಾಧ್ಯಕ್ಷ ಯುಟಿ ಖಾದರ್ ದಕ್ಷಿಣ ಕನ್ನಡ ಜಿಲ್ಲೆಯವರಾಗಿರುವಿದರಿಂದ ಸಹಜವಾಗೇ ಬುದ್ಧಿವಂತರು ಅಂತ ಹೇಳಿ ಉತ್ತರ ಕರ್ನಾಟಕ ಭಾಗದ ಜನರು ಬಹಳ ಮುಗ್ಧರು ಅನ್ನುತ್ತಾರೆ. ಅವರ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಬಿಜೆಪಿ ಶಾಸಕ ಸುನೀಲ ಕುಮಾರ್ ಎದ್ದುನಿಂತು ಸಭಾಧ್ಯಕ್ಷರೇ, ಸದನದಲ್ಲಿ ಸುಳ್ಳು ಹೇಳಬಾರದು, ನಿಮ್ಮನ್ನು ಯಾಕೆ ಮುಗ್ಧರು ಅನ್ನುತ್ತಾರೆ? ಅಂತ ವಿನೋದದ ಧಾಟಿಯಲ್ಲಿ ಹೇಳಿದಾಗ, ಯತ್ನಾಳ್ , ಮುಗ್ಧರಲ್ಲ ಮುಕ್ತರು ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Assembly Session: ಸದನದಲ್ಲಿ ಬೆಳಗಿನ ಜಾವ 1 ಗಂಟೆಯವರೆಗೆ ಕಲಾಪ, ಸಭಾಧ್ಯಕ್ಷ ಯುಟಿ ಖಾದರ್ ಹೇಳಿದ್ದೇನು?