Assembly Session: ಸದನದ ನೀತಿ ನಿಯಮಾವಳಿ ಬಗ್ಗೆ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್ಗೆ ಸ್ಪೀಕರ್ ಯುಟಿ ಖಾದರ್ರಿಂದ ಖಡಕ್ ಪಾಠ!
ಪ್ರಶ್ನೆ ಕೇಳಬೇಕೆಂದಿದ್ದರೆ, ಲಿಖಿತ ರೂಪದಲ್ಲಿ ಕೊಡಿ ಶೂನ್ಯವೇಳೆಯಲ್ಲಿ ಅದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಭಾಧ್ಯಕ್ಷರು ನಯವಾಗಿಯೇ ಗದರಿದರು.
ಬೆಂಗಳೂರು: ಗುರುಮಠಕಲ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್ (Sharanagouda Kandkur) ವಿಧಾನ ಸಭೆಯಲ್ಲಿ ಇಂದು ಸಭಾಧ್ಯಕ್ಷ ಯುಟಿ ಖಾದರ್ (Speaker UT Khader) ಅವರಿಂದ ತೀವ್ರ ಸ್ವರೂಪದ ವಾಗ್ದಂಡನೆಗೆ (reprimand) ಗುರಿಯಾದರು. ಸದನದಲ್ಲಿ ಸಂತಾಪ ಸೂಚನೆ ವೇಳೆ ಶಾಸಕ ಕಂದ್ಕೂರ್ ಭಿತ್ತಿಪತ್ರವೊಂದನ್ನು ಸದನದಲ್ಲಿ ಪ್ರದರ್ಶಿಸಿದ್ದು ಸಭಾಧ್ಯಕ್ಷರನ್ನು ಕೆರಳಿಸಿತು. ಮೊದಲ ಬಾರಿಗೆ ಶಾಸಕರಾಗಿದ್ದೀರಿ, ಸದನದ ರೀತಿ-ನಿಯಮಾವಳಿಗಳನ್ನು ಅರ್ಥಮಾಡಿಕೊಳ್ಳಿ, ಹೀಗೆ ಸದನದಲ್ಲಿ ಸಂತಾಪ ಸೂಚನೆ ನಡೆಯುತ್ತಿರುವಾಗ ಭಿತ್ತಿಪತ್ರ ಹಿಡಿದು ಬಿಟ್ಟಿ ಪ್ರಚಾರ ಗಿಟ್ಟಿಸುವ ಅಗ್ಗದ ಪ್ರಯತ್ನ ಮಾಡೋದು ಬೇಡ. ಸದನದೊಳಗೆ ಭಿತ್ತಿಪತ್ರ ತರಕೂಡದು, ನೀವು ಪ್ರಶ್ನೆ ಕೇಳಬೇಕೆಂದಿದ್ದರೆ, ಲಿಖಿತ ರೂಪದಲ್ಲಿ ಕೊಡಿ ಶೂನ್ಯವೇಳೆಯಲ್ಲಿ ಅದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಸಭಾಧ್ಯಕ್ಷರು ನಯವಾಗಿಯೇ ಗದರಿದರು. ಶರಣಗೌಡ ಕಂದ್ಕೂರ್ ಏನೋ ಹೇಳುವ ಪ್ರಯತ್ನ ಮಾಡಿದರಾದರೂ ಸ್ಪೀಕರ್ ಅವಕಾಶ ನೀಡಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ