ತಮಿಳುನಾಡಿನ ದಿಂಡಿಗಲ್ನಲ್ಲಿ 32 ಅಡಿ ಎತ್ತರದ ಗಣೇಶನ ವಿಗ್ರಹಕ್ಕೆ ವಿಶೇಷ ಪೂಜೆ, ಹರಿದು ಬಂದ ಜನ ಸಾಗರ
ತಮಿಳುನಾಡಿನ ದಿಂಡಿಗಲ್ನ ಅರುಲ್ಮಿಗು ನನ್ಮಾಯಿ ತಾರುಂ ವಿನಯಗರ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಏಷ್ಯಾದಲ್ಲೇ ಅತಿ ದೊಡ್ಡ ಗಣೇಶನ ಮೂರ್ತಿ ಎನ್ನಲಾದ 32 ಅಡಿ ಎತ್ತರದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಗಣೇಶನನ್ನು ಕಣ್ತುಂಬಿಕೊಂಡರು.
ದೇಶದೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ತಮಿಳುನಾಡಿನ ದಿಂಡಿಗಲ್ನ ಅರುಲ್ಮಿಗು ನನ್ಮಾಯಿ ತಾರುಂ ವಿನಯಗರ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಏಷ್ಯಾದಲ್ಲೇ ಅತಿ ದೊಡ್ಡ ಗಣೇಶನ ಮೂರ್ತಿ ಎನ್ನಲಾದ 32 ಅಡಿ ಎತ್ತರದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಗಣೇಶನನ್ನು ಕಣ್ತುಂಬಿಕೊಂಡರು. ಈ ದೇವಾಲಯದಲ್ಲಿ 108 ಗಣೇಶನ ಪುಟ್ಟ ಪುಟ್ಟ ವಿಗ್ರಹಗಳಿವೆ.